ಕಾಂಗ್ರೆಸ್ ಮುಖಂಡರಿಂದ ಸೌಹಾರ್ಧ ಇಫ್ತಾರ್ ಕೂಟ

ಮೈಸೂರು : ಉದಯಗಿರಿ ಪ್ರಕರಣ ಸಂಬಂಧ ಮುಸ್ಲಿಂ ಸಮುದಾಯದ ವಿರುದ್ಧ ನಿರಂತರ ಸುಳ್ಳು ಪ್ರಚಾರ ನಡೆಸಿ ಸಮುದಾಯದ ಹೆಸರಿಗೆ ಕಳಂಕವನ್ನು ತರಲಾಗಿತ್ತು. ಅದನ್ನು ಹೋಗಲಾಡಿಸಲು ಇಂದು ಸರ್ವಧರ್ಮವರನ್ನು ಕರೆದು ಸೌಹಾರ್ಧ ಇಫ್ತಾರ್ ಕೂಟ ಮಾಡುತ್ತಿದ್ದೇವೆ ಎಂದು ಎನ್‌ಆರ್ ಕ್ಷೇತ್ರದ ಅಝೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಇಕ್ಬಾಲ್ ಹೇಳಿದರು.

ನಗರದ ಬನ್ನಿಮಂಟಪದಲ್ಲಿರುವ ರಿ-ಜೆಂಟಾ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ಇಫ್ತಾರ್ ಕೂಟದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಇಫ್ತಾರ್ ಕೂಟಕ್ಕೆ ನಮ್ಮ ಎಲ್ಲ ಕಾಂಗ್ರೆಸ್ ಮುಖಂಡರು, ಯುವ ನಾಯಕರು ನನ್ನ ಹೆಗಲಿಗೆ ಹೆಗಲು ಕೊಟ್ಟು ಸಹಕಾರ ನೀಡಿದ್ದಾರೆ ಎಂದ ಅವರು, ಮುಂದಿನ ದಿನಗಳಲ್ಲಿ ಶಾಸಕರಾದ ತನ್ವೀರ್ ಸೇಠ್ ಅವರು, ಸಚಿವರಾಗುವ ಎಲ್ಲ ಸಾಧ್ಯತೆಗಳು ಇವೆ. ಈಗಾಗಲೇ ಶಾಸಕರಾದ ಕೆ.ಹರೀಶ್‌ಗೌಡ ಅವರು ಈ ಬಗ್ಗೆ ಸುಳಿವು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಕರೆದು ಮತ್ತೊಂದು ಔತಣಕೂಟ ಏರ್ಪಡಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಷಹೇನ್ ಷಾ ಅಹಮದ್, ಕಾಂಗ್ರೆಸ್ ಮುಖಂಡರಾದ ಅಫ್ರೋಜ್ ಖಾನ್, ಸೈಯದ್ ಫಾರೂಖ್, ವಸೀಂ, ಶೌಕತ್ ಅಲಿ, ಶೀಪ್ಟನ್ ಮುಂತಾದವರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು