ಮೈಸೂರು ಧರ್ಮ ಪ್ರಾಂತ್ಯದ ಅಪೋಸ್ಟಾಲಿಕ್ ಅಡ್ಮಿನಿಸ್ಟ್ರೇಟರ್ ಫಾ.ಬರ್ನಾಡ್ ಬ್ಲೇಸಿಯಸ್ ಮೋರಸ್ ಅವರಿಂದ ರಂಜಾನ್ ಶುಭಾಶಯ


 ಮೈಸೂರು : ಮೈಸೂರು ಧರ್ಮ ಪ್ರಾಂತ್ಯದ ಅಪೋಸ್ಟಾಲಿಕ್ ಅಡ್ಮಿನಿಸ್ಟ್ರೇಟರ್ ಫಾ.ಬರ್ನಾಡ್ ಬ್ಲೇಸಿಯಸ್ ಮೋರಸ್ ಅವರು ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಿದರು.

ಭಾನುವಾರ ರಾತ್ರಿ ನಗರದ ಬನ್ನಿಮಂಟಪದಲ್ಲಿರುವ ಹೋಟೆಲ್ ರಿ-ಜೆಂಟಾದಲ್ಲಿ ಶಾಸಕ ತನ್ವೀರ್ ಸೇಠ್ ನೇತೃತ್ವದಲ್ಲಿ ಅವರ ಅಭಿಮಾನಿಗಳು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಂಝಾನ್ ಹಬ್ಬವು ಮುಸ್ಲಿಂ ಸಮುದಾಯಕ್ಕೆ ಪವಿತ್ರವಾದ ಹಬ್ಬವಾಗಿದೆ. 30 ದಿನಗಳ ಉಪವಾಸವಿದ್ದು, ಪ್ರವಾದಿಗಳ ಎಲ್ಲ ಸಂದೇಶಗಳನ್ನು ಪಾಲಿಸುವ ಮೂಲಕ ಈ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಪಾಲಿಸಲಾಗುತ್ತದೆ ಎಂದರು.

ಶಾಸಕ ತನ್ವೀರ್ ಸೇಠ್ ಅವರು ಒಬ್ಬ ಮುತ್ಸದಿ ನಾಯಕರು, ಕ್ರೈಸ್ತ ಸಮುದಾಯದ ಎಲ್ಲ ಕಷ್ಟ ಸುಖಗಳಲ್ಲಿ ಭಾಗಿಯಾಗಿ ನಮ್ಮ ಬೆನ್ನೆಲುಬಾಗಿ ನಿಂತಿದ್ದಾರೆ ಅವರಿಗೆ ಎಲ್ಲ ರೀತಿಯ ಶುಭವಾಗಲಿ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ತಮ್ಮ ದೈಹಿಕ ಶ್ರಮದ ಮೇಲೆ ನಂಬಿಕೆ ಇಟ್ಟುಕೊಂಡು ಕಷ್ಟದಿಂದ ಸ್ನೇಹ ಮತ್ತು ಸಹಬಾಳ್ವೆಯಿಂದ ಜೀವನ ನಡೆಸುತ್ತಿರುವ ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಹೆಸರು ತರಲು ದುಷ್ಟ ಶಕ್ತಿಗಳು ಕಾರ್ಯ ಪ್ರವೃತ್ತವಾಗಿವೆ.ಈ ನಿಟ್ಟಿನಲ್ಲಿ ತಾವುಗಳು ಅತ್ಯಂತ ಎಚ್ಚರಿಕೆಯಿಂದ ಬದುಕು ನಡೆಸಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಶಾಸಕ ತನ್ವೀರ್ ಸೇಠ್ ಅವರು ಫಾ.ಬರ್ನಾಡ್‍ಮೋರಸ್ ಅವರಿಗೆ ಖರ್ಜೂರ ತಿನ್ನಿಸಿದರು.

ನಂತರ ಆಗಮಿಸಿದ ಎಲ್ಲ ಗಣ್ಯರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆಯಾಗಿ ಹೂವಿನ ಕುಂಡ, ಪುಸ್ತಕ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಎಸ್.ಮೂರ್ತಿ, ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಇಕ್ಬಾಲ್, ಉಪಾಧ್ಯಕ್ಷ ಷಹೇನ್ ಷಾ ಅಹಮದ್, ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಕೆ.ಸಿ.ಶೌಕತ್ ಪಾಷ, ಬಷೀರ್ ಅಹಮದ್, ಝೆಡ್‍ಮಾರ್ಕ್ ಸಂಸ್ಥೆಯ ಝುಬೇರ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ಶಹಾಬುದ್ದೀನ್, ಕಾಂಗ್ರೆಸ್ ಮುಖಂಡರಾದ ಅಫ್ರೋಜ್ ಖಾನ್, ಸೈಯದ್ ಫಾರೂಖ್, ವಸೀಂ, ಶೌಕತ್ ಅಲಿ, ಶೀಪ್ಟನ್ ಮುಂತಾದವರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು