ಮೈಸೂರು : ಕೂಲಿ ಕಾರ್ಮಿಕರು, ರೈಲು ಪ್ರಯಾಣಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾತಗಳ್ಳಿ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣ ಮತ್ತು ಸಿದ್ದೀಖ್ ನಗರಕ್ಕೆ ಸಿಟಿ ಬಸ್ ಸೌಲಭ್ಯ ಒದಗಿಸಲು ಯೂತ್ ಕಾಂಗ್ರೆಸ್‍ನಿಂದ ಶಾಸಕ ತನ್ವೀರ್ ಸೇಠ್ ಅವರಿಗೆ ಮನವಿ ಸಲ್ಲಿಸಲಾಯಿತು.
ಎನ್.ಆರ್. ವಿಧಾನಸಭಾ ಕ್ಷೇತ್ರದಲ್ಲಿ ಸಮರ್ಪಕ ಸಿಟಿ ಬಸ್ ಸೌಲಭ್ಯಗಳು ಇಲ್ಲದ ಕಾರಣ ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಮಹಿಳೆಯರಿಗೆ ಸಾಕಷ್ಟು ಅನಾನುಕೂಲವಾಗಿದ್ದು, ಸಪರ್ಮಕ ಸಿಟಿ ಬಸ್ ಸೌಲಭ್ಯ ಒದಗಿಸುವಂತೆ ಮೈಸೂರು ನಗರ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ನೋಫಿಲ್ ಅಹಮದ್ ನೇತೃತ್ವದಲ್ಲಿ ಯುವ ಮುಖಂಡರು ಶಾಸಕ ತನ್ವೀರ್ ಸೇಠ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ನಗರದ ಸಾತಗಳ್ಳಿ ಬಸ್ ಡಿಪೆÇೀದಿಂದ ಮೈಸೂರು ರೈಲ್ವೆ ನಿಲ್ದಾಣ ಮತ್ತು ಸಿದ್ದಿಕ್ ನಗರಕ್ಕೆ ನೇರ ಬಸ್ ಸಂಪರ್ಕದ ಕೊರತೆಯಿಂದಾಗಿ ಇಲ್ಲಿನ ನಿವಾಸಿಗಳು, ವಿಶೇಷವಾಗಿ ರೈಲ್ವೆ ಪ್ರಯಾಣಿಕರು, ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.
ಸಾರ್ವಜನಿಕರು, ಮಹಿಳೆಯರು, ಮಕ್ಕಳು ಸಕಾಲಕ್ಕೆ ಶಾಲಾ ಕಾಲೇಜು, ರೈಲ್ವೆ ನಿಲ್ದಾಣ ತಲುಪಲು ಅನುಕೂಲ ಕಲ್ಪಿಸುವಂತೆ ಅವರು ರೂಟ್ ಮ್ಯಾಪ್ ಸಮೇತ ಮನವಿ ಸಲ್ಲಿಸಿದರು.
ಮಾರ್ಗ-1
ಸಾತಗಳ್ಳಿ ಡಿಪೋದಿಂದ-ಕಲ್ಯಾಣಗಿರಿ-ಬೀಡಿ ಕಾಲೋನಿ-
ಶಾಂತಿನಗರ-ನಿಮ್ರಾ ಮಸೀದಿ-ಅಲ್ ಬದರ್ ಸರ್ಕಲ್-ಸೂರ್ಯ ನಾರಾಯಣ ದೇವಾಲಯ-ಖುಬಾ ಮಸೀದಿ-ಉದಯಗಿರಿ ಮತ್ತು ಕ್ಯಾತಮಾರನಹಳ್ಳಿ ಸಿಗ್ನಲ್- ಕ್ರಿಶ್ಚಿಯನ್ನರ ಸ್ಮಶಾನ- ನೆಕ್ಸಸ್ ಮಾಲ್-ಫೈವ್‍ಲೈಟ್ಸ್ ಸರ್ಕಲ್- ಸಬರ್ ಬಸ್ ನಿಲ್ದಾಣ-ಅಂಚೆ ಕಛೇರಿ-ಕೆ.ಆರ್. ಆಸ್ಪತ್ರೆ- ರೈಲ್ವೆ ನಿಲ್ದಾಣ-ರೈಲ್ವೆ ನಿಲ್ದಾಣದ ಹಿಂದಿನ ಗೇಟ್.
ಮಾರ್ಗ-2
ಸಾತಗಳ್ಳಿ ಡಿಪೋ-ಕಲ್ಯಾಣಗಿರಿ-ಬೀಡಿ ಕಾಲೋನಿ-
ಶಾಂತಿನಗರ-ನಿಮ್ರಾ ಮಸೀದಿ-ಅಲ್ ಬದರ್ ಸರ್ಕಲ್- ಸೂರ್ಯ ನಾರಾಯಣ ದೇವಸ್ಥಾನ- ಖುಬಾ ಮಸೀದಿ-ಉದಯಗಿರಿ ಮತ್ತು ಕ್ಯಾತಮಾರನಹಳ್ಳಿ ಸಿಗ್ನಲ್-ಕ್ರಿಶ್ಚಿಯನ್ನರ ಸ್ಮಶಾನ-ನೆಕ್ಸಸ್ ಮಾಲ್-
ಫೈವ್‍ಲೈಟ್ ಸರ್ಕಲ್- ಅಶೋಕ ರಸ್ತೆ ಜಂಕ್ಷನ್- ಸಂತ ಫಿಲೋಮಿನಾ ಚರ್ಚ್-ಸಿಪಿಸಿ ಪಾಲಿಟೆಕ್ನಿಕ್-ಐಟಿಐ ಕಾಲೇಜು-ಹೈವೆ ಸರ್ಕಲ್-ಶ್ರೀನಿವಾಸ್ ಥಿಯೇಟರ್-ಹನುಮಂತ
ನಗರ-ಜೆಎಸ್‍ಎಸ್ ವೈದ್ಯಕೀಯ ಕಾಲೇಜು-ಸಿದ್ದಿಕ್ ನಗರ
ಈ ಮಾರ್ಗವಾಗಿ ಹೆಚ್ಚುವರಿ ಬಸ್‍ಗಳನ್ನು ಒದಗಿಸಲು ಕೋರಲಾಯಿತು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕ ತನ್ವೀರ್ ಸೇಠ್ ಅವರು, ಸಂಬಂಧಪಟ್ಟವರೊಂದಿಗೆ ಮಾತನಾಡಿ ಶೀಘ್ರದಲ್ಲೇ ಈ ಮಾರ್ಗದಲ್ಲಿ ಬಸ್ ಸೌಲಭ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಬ್ರಾರ್ ಮೊಹಮ್ಮದ್, ನಗರ ಪ್ರಧಾನ ಕಾರ್ಯದರ್ಶಿ ಇಮ್ರಾನ್ ಪಾಷಾ,
ಅಜೀಜ್ ಸೇಠ್ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸಕ್ಲೇನ್, ಮುಖಂಡರಾದ ಶ್ರೀನಿಧಿ ಎಂ.ಪಿ., ಮುಂತಾದವರು ಇದ್ದರು.
0 ಕಾಮೆಂಟ್‌ಗಳು