ಜನತಾ ಬಜೆಟ್ ಮಂಡಿಸಲು ಎಸ್‌ಡಿಪಿಐ ಆಗ್ರಹ : ಮೈಸೂರು ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ, ವಸತಿಗೆ ಆದ್ಯತೆ ನೀಡಲು ಒತ್ತಾಯ

ಮೈಸೂರು : ಮಾರ್ಚ್ 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್‍ನಲ್ಲಿ ತಮ್ಮ ಪಕ್ಷ ಕೋರಿರುವ ‘ಕಲ್ಯಾಣ ರಾಜ್ಯಕ್ಕಾಗಿ ಜನತಾ ಬಜೆಟ್-2025’ರ ಪ್ರಮುಖ ಅಂಶಗಳನ್ನು ಒಳಗೊಂಡಂತೆ ಜನತಾ ಬಜೆಟ್ ಮಂಡಿಸಬೇಕೆಂದು ಎಸ್‍ಡಿಪಿಐ ಜಿಲ್ಲಾ ಅಧ್ಯಕ್ಷ ರಫತ್ ಖಾನ್ ಮನವಿ ಮಾಡಿದರು.

ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ದೇಶದ ಆರ್ಥಿಕತೆಯಲ್ಲಿ ದೊಡ್ಡ ಪಾತ್ರವಹಿಸುವ ಕರ್ನಾಟಕ ರಾಜ್ಯವು ದೇಶದ ಜಿಡಿಪಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಕಳೆದ ವರ್ಷ ಕರ್ನಾಟಕ ಸರಕಾರವು ಮಂಡಿಸಿದ 3 ಲಕ್ಷ 11 ಸಾವಿರ ಕೋಟಿ ರೂಪಾಯಿ ಗಾತ್ರದ ಬಜೆಟ್ 

ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರದೆ ಗ್ಯಾರಂಟಿ ಯೋಜನೆಗಳ ವೆಚ್ಚವನ್ನು ಸರಿದೂಗಿಸಲು ಮತ್ತು ಬಂಡವಾಳ

ಶಾಹಿಗಳನ್ನು ಸಂತೃಪ್ತಿ ಪಡಿಸಲು ನಡೆಸಿದ ಕಸರತ್ತಾಗಿತ್ತು. ಸರ್ಕಾರಗಳು ಮಂಡಿಸುತ್ತಿರುವ ಬಹುತೇಕ ಬಜೆಟ್‍ಗಳು ಜನಕಲ್ಯಾಣಕ್ಕೆ ಒತ್ತುಕೊಡದೆ ಮುಂದೆ ಬರಲಿರುವ ಚುನಾವಣೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಡೆಸುವ ರಾಜಕೀಯ ಲೆಕ್ಕಾಚಾರಗಳ ಬಜೆಟ್‍ಗಳಾಗುತ್ತಿದೆ, ನಿರಂತರ ತುಳಿತಕ್ಕೊಳಗಾದ ಸಮುದಾಯಗಳಾದ ಅಲ್ಪಸಂಖ್ಯಾತ,

ದಲಿತ, ಹಿಂದುಳಿದ ಸಮುದಾಯಗಳನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಸಬಲೀಕರಣ ಮಾಡಲು ದೂರದೃಷ್ಟಿಯ ಯೋಜನೆಗಳಿಗೆ ಅಗತ್ಯವಿರುವ

ಅನುದಾನಗಳನ್ನು ವಾರ್ಷಿಕ ಬಜೆಟ್‍ನಲ್ಲಿ ಮೀಸಲಿಡದೆ ಕಾಟಾಚಾರಕ್ಕೆ ಒಂದಷ್ಟು ಅನುದಾನವನ್ನು ನೀಡುತ್ತಿದ್ದವು. ಮೀಸಲಿಟ್ಟ ಅನುದಾನವನ್ನು ಸಂಬಂಧಪಟ್ಟ ಇಲಾಖೆಗಳಿಗೆ ಬಿಡುಗಡೆ ಮಾಡದೆ ಅಥವಾ ಸಮರ್ಪಕವಾಗಿ ಬಳಸಿಕೊಳ್ಳದಿರುವುದು ಕಂಡುಬಂದಿದೆ. 

ಪ್ರಸ್ತುತ ಮಾರ್ಚ್ 7 ರಂದು 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 

ತಮ್ಮ ಹದಿನಾರನೇಯ ರಾಜ್ಯ ಮುಂಗಡ ಪತ್ರವು ಕಲ್ಯಾಣ ರಾಜ್ಯ

ನಿರ್ಮಾಣದ ಜನಪರವಾದ ‘ಜನತಾ ಬಜೆಟ್’ ಮಂಡಿಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯ ಆಗ್ರಹವಾಗಿದೆ ಎಂದು ಹೇಳಿದರು.

ಪ್ರಮುಖವಾಗಿ ಅಲ್ಪಸಂಖ್ಯಾತರ ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಬಜೆಟ್‍ನಲ್ಲಿ ಸಾಕಷ್ಟು ಹಣ ಮೀಸಲಿಡಬೇಕು.

ವೃತ್ತಿಪರ ಶಿಕ್ಷಣದ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಸ್ನಾತಕೋತ್ತರ ಪದವಿ ಮತ್ತು ಇನ್ನಿತರ

ಉನ್ನತ ವ್ಯಾಸಂಗ ಮಾಡುತ್ತಿರುವ ಎಲ್ಲಾ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ,

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬೈಸಿಕಲ್‍ವಿತರಣೆ, ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ, ತಾಲ್ಲೂಕು ಮಟ್ಟದಲ್ಲಿ ಕೌಶಲ್ಯ ಅಭಿವೃದ್ಧಿ ಮುಂತಾದವುಗಳ ಬಗ್ಗೆ ಹೆಚ್ಚು ಗಮನಹಿಸಬೇಕೆಂದು ಅವರು ಆಗ್ರಹಿಸಿದರು.

ಎಸ್‍ಡಿಪಿಐ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ ಮಾತನಾಡಿ, ಸರ್ಕಾರಗಳು ತಳಮಟ್ಟದ ಜನರ ಶಿಕ್ಷಣ,ಆರೋಗ್ಯ ಮತ್ತು ವಸತಿ ಸಮಸ್ಯೆಗಳ ನಿವಾರಣೆ ಮತ್ತು ಸಮಗ್ರ ಅಭಿವೃದ್ಧಿಗೆ ಶಾಶ್ವತ ಪರಿಹಾರಗಳನ್ನು ಘೋಷಿಸಬೇಕು. ವೈಜ್ಞಾನಿಕ ಮಾಹಿಗಳ ಆಧಾರದಲ್ಲಿ ಬಜೆಟ್ ಹಣವನ್ನು ನಿಗದಿ ಮಾಡಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‍ಡಿಪಿಐ ಮೈಸೂರು ಜಿಲ್ಲಾ ಕೋಶಾಧಿಕಾರಿ ಮನ್ಸೂರ್ ಖಾನ್, ರಾಜ್ಯ ಸಮಿತಿ ಸದಸ್ಯ ತಬ್ರೇಜ್ ಸೇಠ್, ಜಿಲ್ಲಾ ಉಪಾಧ್ಯಕ್ಷ ಮೊಹಮ್ಮದ್ ಸಫಿಉಲ್ಲಾ ಇದ್ದರು. 

ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿ

ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಈ ಹಿಂದೆ ಘೋಷಿಸಿದ ಯೋಜನೆಗಳು ಅನುಷ್ಠಾನಗೊಳ್ಳಬೇಕು ಮತ್ತು ಅವುಗಳಿಗೆ ಅಗತ್ಯವಾದ ಅನುದಾನ ಬಿಡುಗಡೆ ಮಾಡಬೇಕು. ಚಿತ್ರ ನಗರಿ ನಿರ್ಮಾಣ ಮತ್ತು ಕುಶಲಕರ್ಮಿಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು ಹಾಗೂ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ  ಪ್ರವಾಸಿಗರಿಗೆ ಸೌಲಭ್ಯ ಹೆಚ್ಚಿಸಬೇಕು.

ರಫತ್ ಖಾನ್, ಎಸ್‍ಡಿಪಿಐ ಮೈಸೂರು ಜಿಲ್ಲಾ ಅಧ್ಯಕ್ಷ


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು