ಮೈಸೂರು : ರಾಜೀವ್ ನಗರದ ಮೊದಲ ಹಂತದಲ್ಲಿರುವ ಯೂನಿಕ್ ಮಾಂಟೇಸ್ಸರಿ ಶಾಲಾ ವಾರ್ಷಿಕೋತ್ಸವ ಇಲ್ಲಿನ ಎಂ.ಝೆಡ್ ಕನ್ವೇನ್ಷನ್ ಹಾಲ್‌ನಲ್ಲಿ ಶನಿವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.
ಸುಮಾರು ೫೦ಕ್ಕೂ ಹೆಚ್ಚು ಪುಟ್ಟ ಪುಟ್ಟ ಮಕ್ಕಳು ರಂಗು, ರಂಗಿನ ವೇಷಗಳನ್ನು ಧರಿಸಿ, ವಿವಿಧ ಹಾಡುಗಳಿಗೆ ಹೆಜ್ಜೆ ಹಾಕಿ ಪೋಷಕರನ್ನು ರಂಜಿಸಿದರು.
ಮಕ್ಕಳ ಹಾಡು ಮತ್ತು ನೃತ್ಯಕ್ಕೆ ಪೋಷಕರು ಫಿದಾ ಆದರಲ್ಲದೇ, ಚಪ್ಪಾಳೆ ಸಿಡಿಸಿ ತಮ್ಮ ಮಕ್ಕಳನ್ನು ಪ್ರೋತ್ಸಾಹಿಸಿದರು.
ಹಾಡು, ನೃತ್ಯ, ನಟನೆ ಮತ್ತು ವಿವಿಧ ವೇಷಗಳಲ್ಲಿ ಮಕ್ಕಳು ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಜಬೀನ್ ಫಿರ್ದೋಸ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಅನ್ವರ್ ಬೇಗ್ ಅಲಿಯಾಸ್ ಆಫ್ತಾಬ್, ಕರ್ನಾಟಕ ರಕ್ಷಣಾ ವೇದಿಕೆ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಫ್ರೋಜ್ ಖಾನ್, ಸಮಾಜ ಸೇವಕರಾದ ಡಾ.ಮುರ್ತುಝಾ ಹಕೀಂ ಅವರುಗಳು ಹಾಜರಿದ್ದು, ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ನಿಖತ್ ಆರಾ ಮಾತನಾಡಿ, ನಮ್ಮ ಶಾಲೆಯ ವಾರ್ಷಿಕೋತ್ಸವವನ್ನು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಆಚರಿಸುತ್ತಿದ್ದೇವೆ. ಇದಕ್ಕೆ ನಮ್ಮ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಹಾಗೂ ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯರಾದ ಅನ್ವರ್ ಬೇಗ್ ಅಲಿಯಾಸ್ ಆಫ್ತಾಬ್ ಅವರ ಸಹಕಾರ ನಿರಂತರವಾಗಿದೆ ಎಂದರು.
ಶಾಲೆಯಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಲಾಗಿದೆ. ಸದ್ಯ ಪ್ರಾಥಮಿಕ ಹಂತದ ಈ ಶಾಲೆಯನ್ನು ಪ್ರೌಢಶಾಲೆಯ ಮಟ್ಟದ ಎತ್ತರಕ್ಕೆ ಬೆಳೆಸಲು ಶ್ರಮಿಸುತ್ತಿದ್ದೇವೆ. ಮಕ್ಕಳು ಆಟದೊಂದಿಗೆ ಪಾಠವನ್ನು ಉತ್ಸಾಹದಿಂದ ಕಲಿಯುತ್ತಿದ್ದಾರೆ. ಮೊಬೈಲ್ ದುಷ್ಪರಿಣಾಮದ ಬಗ್ಗೆ ಮಕ್ಕಳಿಗೆ ಹಾಡಿನ ಮೂಲಕ ತಿಳಿವಳಿಕೆ ನೀಡಲಾಗಿದೆ ಎಂದರು.
ಸಹ ಕಾರ್ಯದರ್ಶಿ ಶಿಫಾ ಕೆ., ಮಾತನಾಡಿ, ಅತ್ಯಂತ ಉತ್ಸಾಹದಿಂದ ಮಕ್ಕಳು ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದಾರೆ. ಆಟದೊಂದಿಗೆ, ಹಾಡಿನೊಂದಿಗೆ ಮಕ್ಕಳಿಗೆ ಪಾಠಗಳನ್ನು ಪಾಠಗಳನ್ನು ಸುಲಭವಾಗಿ ಕಲಿಸಬಹುದು ಈ ನಿಟ್ಟಿನಲ್ಲಿ ಇಂದಿನ ಶಾಲಾ ವಾರ್ಷಿಕೋತ್ಸವ ಅದ್ದೂರಿಯಾಗಿ ನಡೆದಿದೆ ಎಂದರು.
0 ಕಾಮೆಂಟ್‌ಗಳು