ಮೈಸೂರು: ಸಹಕಾರಿ ಕ್ಷೇತ್ರವು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಇಂತಹ ಕ್ಷೇತ್ರದಲ್ಲಿ ಸಹಕಾರ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿಹೆಚ್.ಡಿ ಪಡೆದವರಿಗೆ ಯಾವುದೇ ಉದ್ಯೋಗ ಅವಕಾಶಗಳು ದೊರಕುತ್ತಿಲ್ಲ ಎಂದು ಮಹಾರಾಜ ಕಾಲೇಜು ಸಂಶೋಧನಾ ವಿದ್ಯಾರ್ಥಿಗಳು ಆರೋಪಿಸಿದರು.
ಈ ಕುರಿತು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪಿ.ಮರಿಸ್ವಾಮಿ ಅವರು ಮಾತನಾಡಿ, ಇತಿಹಾಸದಲ್ಲಿ ಸಹಕಾರ ಕ್ಷೇತ್ರಕ್ಕೆ 182 ವರ್ಷಗಳು ಸಂದಿವೆ, ಭಾರತದಲ್ಲಿ ಸಹಕಾರ ಕ್ಷೇತ್ರವು ಅಧಿಕೃತವಾಗಿ ಕಾಲಿರಿಸಿ ಸರಿಸುಮಾರು 120 ವರ್ಷಗಳಾಗಿವೆ, ಭಾರತದ ಆರ್ಥಿಕತೆಯ ಬೆಳವಣಿಗೆಯ ಪಾಲಿನಲ್ಲಿ ಹೆಮ್ಮರವಾಗಿ ಬೆಳೆದುನಿಂತಿರುವ ಸಹಕಾರಿ ಬ್ಯಾಂಕುಗಳು ಸಂಘ ಸಂಸ್ಥೆಗಳು ಭಾರತದ ಅರ್ಥಿಕತೆಯಲ್ಲಿ ಗ್ರಾಮೀಣ ಪ್ರದೇಶದಿಂದ ಹಿಡಿದು ನಗರ ಪ್ರದೇಶದವರೆಗೂ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿವೆ.
ಆದರೆ, ಇದೀಗ ಸಹಕಾರ ಕ್ಷೇತ್ರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಂತಹ ನಂಬಿಕೆ ಉಳಿದಿಲ್ಲ. ಎಲ್ಲೆಲ್ಲೂ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಕೇಳಿಬರುತ್ತಿದೆ. ಸಹಕಾರ ಕ್ಷೇತ್ರದಲ್ಲಿ ಪದವಿ ಪಡೆದವರಿಗೆ ಇಲ್ಲಿ ಯಾವುದೇ ಉದ್ಯೋಗ ಸಿಗುತ್ತಿಲ್ಲ. ಬದಲಾಗಿ ಎಲ್ಲೆಲ್ಲೂ ಅಕ್ರಮ ನೇಮಕಾತಿಗಳು ನಡೆಯುತ್ತಿವೆ. ಸಹಕಾರದ ಮೂಲ ತತ್ತ್ವ-ಗುಣಗಳಿಗೆ ಇವು ತದ್ವಿರುದ್ಧವಾಗಿ ಭ್ರಷ್ಟಾಚಾರದ ತೆಕ್ಕೆಗೆ ಸಿಲುಕಿರುವುದು ನೋವಿನ ಸಂಗತಿಯಾಗಿದೆ, ಸಹಕಾರಿ ಬ್ಯಾಂಕ್ ಮತ್ತು ಸಂಸ್ಥೆಗಳು ಆಯಾ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳ ಕಪಿಮುಷ್ಟಿಯಲ್ಲಿ ಇವೆ. ಇದಕ್ಕೆ ಮಂಡ್ಯ ಜಿಲ್ಲೆಯ ಎಂಡಿಸಿಸಿ ಬ್ಯಾಂಕ್‍ನ ಸಿಬ್ಬಂದಿ ನೇಮಕಾತಿಯ ವಿಚಾರದಲ್ಲಿ ಅಕ್ರಮ ನಡೆದಿರುವುದು ಸಾಕ್ಷಿಯಾಗಿದೆ. ಸರ್ಕಾರ ಮತ್ತು ಸಹಕಾರ ಇಲಾಖೆ ಸಚಿವರು ಮತ್ತು ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಇಂತಹ ಅಕ್ರಮ ನೇಮಕಾತಿಗಳನ್ನು ತಡೆದು, ಸಹಕಾರ ಇಲಾಖೆಯ ಪದವೀಧರರಿಗೆ ಅವಕಾಶ ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದರು.
ಅಲ್ಲದೇ, ಸಹಕಾರ ವಿಷಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಂತಹ ಯುವಕರಿಗೆ ಶೇಕಡಾ 100 ರಷ್ಟು ಉದ್ಯೋಗವನ್ನು ಮಿಸಲಿಡಬೇಕು, ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಸಹಕಾರ ವಿಷಯವನ್ನು ಬೋಧನ ವಿಷಯವಾಗಿ ಪರಿಗಣಿಸಿ ತಮ್ಮದೇ ಕ್ಷೇತ್ರದಲ್ಲಿ, ಉದ್ಯೋಗ ಸಿಗುವಂತೆ ಮಾಡಬೇಕೆಂದು ಅವರು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಅವರು ಕೆಲವು ಬೇಡಿಕೆಗಳನ್ನು ಪ್ರಸ್ತಾಪ ಮಾಡಿದ್ದು, ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ, ಸಹಕಾರ ವಿಷಯವನ್ನು ಬೋಧನಾ/ಐಚ್ಛಿಕ ವಿಷಯವಾಗಿ ಪರಿಚಯಿಸಿ-ಪರಿಗಣಿಸಬೇಕು.
ಸಹಕಾರಿ ಸಂಘ ಸಂಸ್ಥೆಗಳು, ಸಹಕಾರಿ ಬ್ಯಾಂಕಿಂಗ್ ವಲಯಗಳಲ್ಲಿ, ಸಹಕಾರ ಡಿಪೆÇ್ಲಮೊ ಕೋರ್ಸ್ ಅನ್ನು ಮಾತ್ರ ಪರಿಗಣಿಸದೆ, ಸಹಕಾರ ವಿಷಯದಲಿ, ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿ.ಹೆಚ್.ಡಿ.
ಪಡೆದಂತಹ ಪದವೀಧರ ಅಭ್ಯರ್ಥಿಗಳನ್ನು ನೇಮಕಾತಿಯಲ್ಲಿ ಮೊದಲ ಆದ್ಯತೆಯಾಗಿ ಪರಿಗಣಿಸಬೇಕು. ಸಹಕಾರ ಇಲಾಖೆ ಮತ್ತು ಸಹಕಾರ ವಲಯದ ಸಂಘ-ಸಂಸ್ಥೆಗಳಲ್ಲಿನ ನೇಮಕಾತಿಗಳಲ್ಲಿ ಸಹಕಾರ ವಿಷಯದಲಿ ಪದವಿ ಪಡೆದಂತಹ ಅಭ್ಯರ್ಥಿಗಳಿಗೆ ಶೇ100 ರಷ್ಟು ಉದ್ಯೋಗವನ್ನು ಮೀಸಲಿಡಬೇಕು. ಹಾಗೂ ನೇಮಕಾತಿಯಲ್ಲಿ, ನೇರ ಮತ್ತು ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು. ಸರ್ಕಾರ ಮತ್ತು ಸಂಬಂಧಿಸಿದ ಇಲಾಖಾ ಮುಖ್ಯಸ್ಥರುಗಳು ಈ ಮೇಲೆ ತಿಳಿಸಿದ ಬೇಡಿಕೆಗಳನ್ನು ಪರಿಗಣಿಸಿ, ಶೀಘ್ರ ಜಾರಿಗೊಳಿಸುವಂತೆ ಸೂಕ್ತ ಕ್ರಮವಹಿಸಬೇಕೆಂದು ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಚಂದ್ರಶೇಖರ್, ಮರಿಸ್ವಾಮಿ, ಸುಭಾಷ್, ಶಿವಕುಮಾರ್, ಮಹೇಶ್ ಇದ್ದರು.
0 ಕಾಮೆಂಟ್‌ಗಳು