’ಎಂಪವರ್ ಹರ್’ ಕಾರ್ಯಕ್ರಮದಲ್ಲಿ ಎ.ಮಣಿಮೇಖಲೈ ಸಲಹೆ
ಮೈಸೂರು : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಎ.ಮಣಿಮೇಖಲೈ ಅವರ ನೇತೃತ್ವದಲ್ಲಿ ಮೈಸೂರು ನಗರದಲ್ಲಿರುವ ಅಜಿತ ನೆಲೆ ಆಶ್ರಯ ರಹಿತ ಮಕ್ಕಳ ಪುನರ್ವಸತಿ ಕೇಂದ್ರದಲ್ಲಿ "ಎಂಪವರ್ ಹರ್" ಶೀರ್ಷಿಕೆಯಡಿ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ 20ಕ್ಕಿಂತ ಹೆಚ್ಚು ಹೆಣ್ಣುಮಕ್ಕಳು ಭಾಗವಹಿಸಿದರು.
ವಲಯ ಮುಖ್ಯಸ್ಥರಾದ ನವ್ನೀತ್ ಕುಮಾರ್ ಮತ್ತು ಮೈಸೂರು ಪ್ರಾದೇಶಿಕ ಕಚೇರಿ ಮುಖ್ಯಸ್ಥರಾದ ಸುನಿಲ್ ವಿ ಪಾಟೀಲ, ವಿನೋದ್, ನೆಲೆ ಫೌಂಡೇಷನ್ ಸಂಸ್ಥಾಪಕ ಟ್ರಸ್ಟಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಎ.ಮಣಿಮೇಖಲೈ ಅವರು ಮಾತನಾಡಿ, ಯಶಸ್ಸನ್ನು ಸಾಧಿಸಲು ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿರುವುದು ಮಕ್ಕಳಿಗೆ ಅತ್ಯವಶ್ಯಕ. ಮತ್ತು ಮಹಿಳಾ ಸಬಲೀಕರಣವು ಅವರ ನೆಚ್ಚಿನ ಗುರಿಯತ್ತ ಸಾಗಲು ರೆಕ್ಕೆಗಳನ್ನು ನೀಡುತ್ತದೆ ಎಂದು ಹುರಿದುಂಬಿಸಿದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೆಲೆ ಫೌಂಡೇಶನ್‍ಗೆ ರೂ. 25,000 ದೇಣಿಗೆ ನೀಡಿ, ಮಕ್ಕಳಿಗೆ ಸ್ಮರಣಿಕೆಗಳನ್ನು ವಿತರಿಸಿದರು.
0 ಕಾಮೆಂಟ್‌ಗಳು