ಮೈಸೂರು : ನಗರದ ಖಾಸಗಿ ಹೋಟೆಲ್‍ನಲ್ಲಿ ಶನಿವಾರ ಏರ್ಪಡಿಸಿದ್ದ ‘ಮೂವರ್ಸ್ ಗಿಲ್ಡ್ ಆಫ್ ಇಂಡಿಯಾ’ 4ನೇ ವರ್ಷದ ವಾರ್ಷಿಕ ಸಮ್ಮೇಳನ ಯಶಸ್ವಿಯಾಗಿ ಜರುಗಿತು.
ಪ್ಯಾಕರ್ಸ್ ಅಂಡ್ ಮೂವರ್ಸ್ ಉದ್ಯಮದಲ್ಲಿ ತೊಡಗಿರುವ ದೇಶದ ಹಲವಾರು ಉದ್ಯಮಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳ:ನ್ನು ಮಂಡಿಸಿದರು.
ಸಮ್ಮೇಳನದಲ್ಲಿ ಉದ್ಯಮಿಗಳು ತಮ್ಮ ಸೇವಾಕಾರ್ಯದಲ್ಲಿ ಅಳವಡಿಸಿಕೊಳ್ಳಬೇಕಿರುವ ತಾಂತ್ರಿಕತೆ ಮತ್ತು ಉದ್ಯಮದ ಅಭಿವೃದ್ಧಿಗೆ ಅಗತ್ಯವಾದ ತರಬೇತಿ, ಸಂಪನ್ಮೂಲ ಕ್ರೋಢೀಕರಣ, ಅನ್ವೇಷಣೆ, ಹೊಸ ಹೊಸ ಸವಾಲುಗಳು, ಅಗತ್ಯ ಪರಿಹಾರಗಳ ಬಗ್ಗೆ ಹಿರಿಯ ಉದ್ಯಮಿಗಳು ಸಲಹೆಗಳನ್ನು ನೀಡಿದರು.
ಹಿರಿಯ ಉದ್ಯಮಿ ಲಯನ್ ಎನ್. ಸುಬ್ರಹ್ಮಣ್ಯ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ‘ಮೂವರ್ಸ್ ಗಿಲ್ಡ್ ಆಫ್ ಇಂಡಿಯಾ’ 4ನೇ ವಾರ್ಷಿಕ ಸಮ್ಮೇಳನ ಮೈಸೂರಿನಲ್ಲಿ ನಡೆಸುತ್ತಿರುವುದು ಸಂತೋಷದ ವಿಷಯ. ಈ ಉದ್ಯಮದಲ್ಲಿ ಯುವಕರಿಗೆ ಸಾಕಷ್ಟು ಉದ್ಯೋಗದ ಅವಕಾಶಗಳಿವೆ. ಸೇವಾ ಕ್ಷೇತ್ರದ ಈ ಉದ್ಯಮದಲ್ಲಿ ನಿರತರಾದವರಿಗೆ ಇಂದು ತಮ್ಮ ಉದ್ಯಮವನ್ನು ಮತ್ತಷ್ಟು ಅಭಿವೃದ್ಧಿ ಮಾಡಿಕೊಳ್ಳುವುದು ಹೇಗೆ, ತಂತ್ರಜ್ಞಾನವನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಸಾಕಷ್ಟು ಚರ್ಚೆಗಳು, ಸಲಹೆಗಳು, ಅಭಿಪ್ರಾಯಗಳು ವ್ಯಕ್ತವಾಗಿದೆ. ಇದೊಂದು ಅತ್ಯುತ್ತಮ ಉದ್ಯಮವಾಗಿ ಬೆಳೆದು ಈ ಭಾಗದ ಯುವಕರಿಗೆ ಉದ್ಯೋಗ ಸಿಗಲಿ ಎನ್ನುವುದು ನಮ್ಮ ಆಶಯವಾಗಿದೆ ಎಂದರು.
‘ಮೂವರ್ಸ್ ಗಿಲ್ಡ್ ಆಫ್ ಇಂಡಿಯಾ’ ಸಂಸ್ಥಾಪಕರಾದ ಪಿ.ಕೆ. ಶರ್ಮಾ ಮಾತನಾಡಿ, ಈಗಾಗಲೇ ನಾವು ‘ಮೂವರ್ಸ್ ಗಿಲ್ಡ್ ಆಫ್ ಇಂಡಿಯಾ’ ದ ಮೂರು ವಾರ್ಷಿಕ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ್ದು, 4ನೇ ವಾರ್ಷಿಕ ಸಮ್ಮೇಳನವೂ ಸಹ ಅತ್ಯಂತ ಯಶಸ್ವಿಯಾಗಿ ಜರುಗಿದೆ. ನಮ್ಮ ಸಹೋದ್ಯೋಗಿ ಉದ್ಯಮಿಗಳಿಗೆ ಸಾಕಷ್ಟು ಮಾಹಿತಿ ನೀಡಲಾಗಿದೆ ಎಂದರು.
ಕಂಟ್ರಿ ಹೆಡ್ ವಿನೋದ್ ಶರ್ಮಾ ಮಾತನಾಡಿ, ‘ಮೂವರ್ಸ್ ಗಿಲ್ಡ್ ಆಫ್ ಇಂಡಿಯಾ’ ದ 4ನೇ ವಾರ್ಷಿಕ ಸಮ್ಮೇಳನವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ದೇಶದ 70ನಗರಗಳಿಂದ 100ಕ್ಕೂ ಹೆಚ್ಚು ಉದ್ಯಮಿಗಳು ಈ ವರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ಪ್ರೋತ್ಸಾಹದಾಯಕವಾಗಿ ಉದ್ಯಮದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿರುವುದು ಶ್ಲಾಘನೀಯ ಎಂದರು.
ದಕ್ಷಿಣ ಭಾರತದ ಮುಖ್ಯಸ್ಥ ಹಾಗೂ ಮೈಸೂರು ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಜಿ. ವಿಠಲ ಮಾತನಾಡಿ, ದೇಶದ ಮೂರು ಪ್ರಮುಖ ನಗರಗಳಲ್ಲಿ ಈ ಹಿಂದೆ ಮೂರು ವಾರ್ಷಿಕ ಸಮ್ಮೇಳನಗಳು ಯಶಸ್ಬಿಯಾಗಿ ನಡೆದಿವೆ. ನಾಲ್ಕನೇ ವಾರ್ಷಿಕ ಸಮ್ಮೇಲನವನ್ನು ಅರಮನೆಗಳ ನಗರಿ ಮೈಸೂರಿನಲ್ಲಿ ಆಯೋಜಿಸಲಾಗಿದೆ. ಮೈಸೂರಿನಲ್ಲಿ ನಮ್ಮ ಉದ್ಯಮದ ಅಭಿವೃದ್ಧಿಗೆ ವಿಫುಲ ಅವಕಾಶಗಳಿದ್ದು, ದೊಡ್ಡ ದೊಡ್ಡ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳೊಂದಿಗೆ ನಾವು ಒಡಂಬಡಿಕೆ ಹೊಂದಿದ್ದೇವೆ ಎಂದರು.
ಸಮ್ಮೇಳನದಲ್ಲಿ ಆಹ್ವಾನಿತ ಗಣ್ಯರು, ಉದ್ಘಾಟಕರು ಮತ್ತು ಸಂಸ್ಥಾಪಕರನ್ನು ಆತ್ಮೀಯವಾಗಿ ಗೌರವಿಸಲಾಯಿತು.
0 ಕಾಮೆಂಟ್‌ಗಳು