ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ, ಜೆಡಿಎಸ್ ರಾಜಕೀಯ ಕುತಂತ್ರಕ್ಕೆ ಮಣಿಯದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬಾರದು ಅವರು ಅಧಿಕಾರದಲ್ಲಿ ಇದ್ದು, ತನಿಖೆ ಎದುರಿಸಬೇಕೆಂದು ಮೈಸೂರಿನ ಹಿರಿಯ ವಕೀಲರಾದ ಜೆ.ಎನ್.ಲಕ್ಷ್ಮಣ್ ಒತ್ತಾಯಿಸಿದ್ದಾರೆ.
ಶುಕ್ರವಾರ ಜಿಲ್ಲಾ ಪತ್ರಕರ್ತರ ಭವನದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರು ಈ ರಾಜ್ಯ ಕಂಡ ಜನಪ್ರಿಯ ಹಾಗೂ ಜನಾನುರಾಗಿ ಮುಖ್ಯಮಂತ್ರಿಗಳು, ಒಬ್ಬ ಹಿಂದುಳಿದ ವರ್ಗದ ನಾಯಕ ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವುದನ್ನು ಸಹಿಸದೆ, ಅವರನ್ನು ಪದಚ್ಯುತಿಗೊಳಿಸಲು ವಿರೋಧ ಪಕ್ಷಗಳು ಸತತವಾಗು ಹುನ್ನಾರ ನಡೆಸುತ್ತಿವೆ. ಸ್ವಾಯುತ್ತ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿವೆ. ಮಾಡದ ಅಪರಾಧವನ್ನು ಅವರ ಮೇಲೆ ಹೊರಿಸುವ ಪ್ರಯತ್ನಗಳು ನಡೆಯುತ್ತಿವೆ. ಇದ್ಯಾವುದಕ್ಕೂ ಸಿದ್ದರಾಮಯ್ಯ ಮಣಿಯಬಾರದು ಅವರ ಹಿಂದೆ ಕೊಟ್ಯಾಂತರ ಕನ್ನಡಿಗರು ಇದ್ದಾರೆ ಎಂದು ಲಕ್ಷ್ಮಣ್ ಹೇಳಿದರು.
ಸಮಾಜದಲ್ಲಿರುವ ತಾರತಮ್ಯ ನಿವಾರಣೆಗಾಗಿ ಕಾಂಗ್ರೆಸ್ ಪಕ್ಷ ನೀಡಿದ ಪಂಚಭಾಗ್ಯಗಳು ರಾಜ್ಯದ ಬಡಜನರ, ಮಹಿಳೆಯರ ಬದುಕು ಹಸನು ಮಾಡಿದೆ. ಇದರಿಂದ ಸಿದ್ದರಾಮಯ್ಯ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಿಎಂ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿರುವುದನ್ನು ಸಹಿಸದೆ ವಿರೋಧ ಪಕ್ಷಗಳು ಸಿದ್ದರಾಮಯ್ಯ ವಿರುದ್ಧ ಸತತ ಆರೋಪಗಳನ್ನು ಮಾಡುತ್ತಿವೆ ಎಂದು ಲಕ್ಷ್ಮಣ್ ವ್ಯಂಗ್ಯವಾಡಿದರು.
ಕೇಂದ್ರ ಸರ್ಕಾರ ಕೇವಲ ಉತ್ತರ ಭಾರತದ ಅಭಿವೃದ್ಧಿಗೆ ಮುಂದಾಗಿ, ದಕ್ಷಿಣ ಭಾರತದ ರಾಜ್ಯಗಳ ಬಗ್ಗೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಇದನ್ನು ಖ್ಯಾತ ಸಾಹಿತಿ ಎಸ್.ಎಲ್.
ಬೈರಪ್ಪನವರು ಇತ್ತೀಚೆಗೆ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಿದ್ದರಾಮಯ್ಯನವರ ಪ್ರಗತಿಪರ ಸಮಾಜಮುಖಿ
ಕಾರ್ಯಗಳು ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ.
ಇಂತಹ ಸಮಾಜ ರಕ್ಷಕ ನಾಯಕರುಗಳ ಮೇಲೆ ಕೇಂದ್ರದ ಬಿಜೆಪಿ ಪ್ರಮುಖರು ಹುನ್ನಾರ ರೂಪಿಸಿ, ಬಿಜೆಪಿಯೇತರ ಸರ್ಕಾರಗಳನ್ನು ಅಸ್ತಿರಗೊಳಿಸುವ ಪ್ರಯುತ್ನ ನಡೆಸುತ್ತಿವೆ ಎಂದು ಲಕ್ಷ್ಮಣ್ ದೂರಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇನ್ನೂ ಚಿಕ್ಕವಯಸ್ಸಿನವರು, ಆತ ಯಾವಾಗಲೂ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಕನವರಿಸುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಸಹಕಾರ ನೀಡಬೇಕು. ಮುಡಾ ಪ್ರಕರಣವು ತನಿಖಾ ಹಂತದಲ್ಲಿದೆ. ಇದೀಗ ವಿಚಾರಣೆ ಆರಂಭವಾಗಿದೆ. ರಾಜ್ಯದ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಡಬೇಕು.
ಸಿಎಂ ಸಿದ್ದರಾಮಯ್ಯನವರ ಬೆಂಬಲಕ್ಕೆ ದೇಶದ ಕಾಂಗ್ರೆಸ್ ಪಕ್ಷದ ವರಿಷ್ಟರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ
ಎಲ್ಲ ನಾಯಕರು ಟೊಂಕ ಕಟ್ಟಿ ನಿಂತಿದ್ದಾರೆ. ಹೀಗಾಗಿ ಸಿಎಂ
ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.
ಇನ್ನು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸುವುದು ಹಗಲು ಗನಸು, ಅದರ ರಾಜ್ಯಾಧ್ಯಕ್ಷರ ಬಾಲಿಶ ಕನವರಿಕೆ ಎಂದೂ ಸಫಲವಾಗುವುದಿಲ್ಲ.
ದೆಹಲಿ ಮುಖ್ಯಮಂತ್ರಿ ಕೇಜ್‌ವಾಲ್ ಬಂಧನದ ಸಂಬಂಧ ದೇಶದ ವರಿಷ್ಠ ನ್ಯಾಯಾಲಯವು ತನಿಖಾ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಎಚ್ಚರಿಕೆ ನೀಡಿದ್ದು, ಸಿಬಿಐ ವಿರುದ್ಧ ಅದರ ತೀರ್ಪಿನಲ್ಲಿ "ಒಂದು
ಸ್ವತಂತ್ರ ಹಾಗೂ ಕಾನೂನುಪಾಲಕ ಸಂಸ್ಥೆಯಾಗಿ ’ಸಿ.ಬಿ.ಐ.’ ವ್ಯವಸ್ಥೆಯ ಮೇಲ್ಪಂಕ್ತಿಯಾಗಿರಬೇಕು. ಅದನ್ನು
ಹೊರತುಪಡಿಸಿ ವ್ಯವಸ್ಥೆಯ ಕಪಿಮುಷ್ಟಿಯಲ್ಲಿರುವ ಪಂಜರದ ಗಿಳಿಯಾಗಿರಬಾರದು ಎಂದು ಎಚ್ಚರಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವರಿಷ್ಠ ನ್ಯಾಯಾದೀಶರ ಮಾತುಗಳನ್ನು ನಮ್ಮ ಮಾಧ್ಯಮ ಮಿತ್ರರು ದೇಶದಲ್ಲೆಲ್ಲೂ ಗಂಭೀರವಾಗಿ ಪರಿಗಣಿಸುತ್ತಿಲ್ಲವೆಂಬುದು ವಕೀಲನಾದ ನನಗೆ ಮಾನಸಿಕ ವೇದನೆ ಉಂಟು ಮಾಡಿದೆ.
ತಾನಾಶಾಹಿ ರೀತ್ಯ ವರ್ತಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ವರಿಷ್ಠರು ತಮ್ಮ ಹಿಡಿತದಲ್ಲಿರುವ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಬಳಸಿ ಅಭಿವೃದ್ಧಿ ಪರ ಕೂಗನ್ನು ಎತ್ತುವ ರಾಜ್ಯಗಳನ್ನು
ಹಾಗೂ ಅದರ ಮುಖ್ಯಮಂತ್ರಿಗಳನ್ನು ತುಳಿಯುತ್ತ ಬರುತ್ತಿರುವುದು ಒಂದು ಮಾರಕವಾದ ಪ್ರಜಾಪ್ರಭುತ್ವದ ಅವಹೇಳನಕಾರಿ ಅಂಶವಾಗಿದೆ.
ಜೆ.ಎನ್.ಲಕ್ಷ್ಮಣ್, ಹಿರಿಯ ವಕೀಲರು
0 ಕಾಮೆಂಟ್‌ಗಳು