ನಾಡಹಬ್ಬ ಮೈಸೂರು ದಸರಾ ಉಪ ಸಮಿತಿ ನೇಮಕದಲ್ಲಿ ಮೈಸೂರಿನ ವಕೀಲರ ನಿರ್ಲಕ್ಷ್ಯ : ಕಾಂಗ್ರೆಸ್ ಮುಖಂಡ, ಹಿರಿಯ ವಕೀಲ ಜೆ.ಎನ್.ಲಕ್ಷ್ಮಣ್ ಬೇಸರ


 ಮೈಸೂರು : ನಾಡಹಬ್ಬ ಮೈಸೂರು ದಸರಾ ಉಪಸಮಿತಿಗಳಲ್ಲಿ ಚಾಮರಾಜನಗರ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರಿಗೆ ಸಿಂಹಪಾಲು ನೀಡಲಾಗಿದ್ದು, ಮೈಸೂರು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರನ್ನು, ವಿಶೇಷವಾಗಿ ವಕೀಲರನ್ನು ನಿರ್ಲಕ್ಷಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ, ಹಿರಿಯ ವಕೀಲ ಜೆ.ಎನ್.ಲಕ್ಷ್ಮಣ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಮೈಸೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಹಿರಿಯ ನಾಯಕರು ಮತ್ತು ಕಾರ್ಯಕರ್ತರಿಗೆ ಸ್ಥಾನಮಾನ ನೀಡುವುದಿರಲಿ, ಕನಿಷ್ಠ ಒಂದು ದಸರಾ ಪಾಸ್‍ಗೂ ಪರದಾಡುವ ಸ್ಥಿತಿ ಎದುರಾಗಿದೆ. 

ಯಾವೊಬ್ಬ ಮುಖಂಡರೂ ಪಾಸ್ ಕುರಿತು ಕನಿಷ್ಠ ಒಂದು ಮಾಹಿತಿಯನ್ನೂ ನೀಡಿಲ್ಲ. ಇದು ಮೈಸೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರ ದುರಂತ, ಪಕ್ಷಕ್ಕಾಗಿ ಹಗಲಿರುಳು ದುಡಿದವರನ್ನು ಯಾರೂ ಕೇಳುವವರಿಲ್ಲ ಎಂದು ಟೀಕಿಸಿದರು.

ಅದಲ್ಲದೇ, 1973ರಲ್ಲಿ ಮೈಸೂರು ದಸರಾ ಪುನರಾರಂಭಗೊಳಿಸಿದ ಹಿರಿಯ ಕಾಂಗ್ರೆಸ್ ನಾಯಕರನ್ನು ಈ ಸಲ ನಿರ್ಲಕ್ಷಿಸಿಸಲಾಗಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಿಸಿ ವಕೀಲರು ಹಾಗೂ ಹಿರಿಯ ನಾಯಕರನ್ನು ತಿರಸ್ಕರಿಸದೆ ಪಾಸುಗಳನ್ನು ವಿತರಿಸುವ ಕಾರ್ಯದ ಕಡೆ ತುರ್ತು ಗಮನ ಹರಿಸಬೇಕೆಂದು ಲಕ್ಷ್ಮಣ್ ವಕೀಲರ ಪರವಾಗಿ ಒತ್ತಾಯಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು