ಪಾಂಡವಪುರದ ಯುವಕನಿಗೆ ಒಲಿದ 25 ಕೋಟಿ ಮೊತ್ತದ ಕೇರಳ ಓಣಂ ಬಂಪರ್ ಲಾಟರಿ : ರಾತ್ರೋರಾತ್ರಿ ಕೋಟ್ಯಾಧೀಶನಾದ ಸ್ಕೂಟರ್ ಮ್ಯಕಾನಿಕ್
ಅಕ್ಟೋಬರ್ 10, 2024
ಪಾಂಡವಪುರ : ಇಲ್ಲಿನ ಸ್ಕೂಟರ್ ಮ್ಯಕಾನಿಕ್ ಒಬ್ಬರಿಗೆ ಕೇರಳ ರಾಜ್ಯದ ಓಣಂ ಬಂಪರ್ ಲಾಟರಿ ಹೊಡೆದಿದ್ದು, ಬರೋಬ್ಬರಿ 25 ಕೋಟಿ ಬಹುಮಾನ ಬಂದಿದೆ. ಪಾಂಡವಪುರದ ಮಂಡ್ಯ ರಸ್ತೆಯ ಪೆಟ್ಟಿ ಅಂಗಡಿಯಲ್ಲಿ ಸ್ಕೂಟರ್ ಮ್ಯಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಅಲ್ತಾಫ್ ಎಂಬುವವರೇ ಈ ಅದೃಷ್ಟಶಾಲಿಯಾಗಿದ್ದಾರೆ. ಕೇರಳದ ವಯನಾಡು ಏಜೆನ್ಸಿ ಮೂಲಕ ಈ ಲಾಟರಿ ಟಿಕೆಟ್ ಅನ್ನು 500 ರೂ.ಕೊಟ್ಟು ಅವರು ಖರೀದಿ ಮಾಡಿದ್ದರು. ನಿನ್ನೆಯಷ್ಟೇ ಅದರ ಫಲಿತಾಂಶ ಬಂದಿತ್ತು. ಟಿಕೆಟ್ ಸಂಖ್ಯೆಟಿಜಿ-434222 ಆಗಿದೆ. ಅಲ್ತಾಫ್ ಬಡ ಕುಟುಂಬದವರು ಅವರಿಗೆ ಪತ್ನಿ, 20 ವರ್ಷದ ಒಬ್ಬ ಗಂಡು ಮಗ, ಮತ್ತು 18 ವರ್ಷದ ಒಬ್ಬಳು ಹೆಣ್ಣು ಮಗಳಿದ್ದಾಳೆ. ಪಾಂಡವಪುರ ಟೌನ್ ಪೊಲೀಸ್ ಸ್ಟೇಷನ್ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಅಲ್ತಾಫ್ ಅವರಿಗೆ 25 ಕೋಟಿ ರೂ. ಲಾಟರಿ ಹೊಡೆದ ವಿಷಯ ತಿಳಿಯುತಿದ್ದಂತೆ ಕೇರಳ ಮಾಧ್ಯಮಗಳು ಅಲ್ತಾಫ್ ಅವರ ಬೆನ್ನುಬಿದ್ದು, ಅವರನ್ನು ತಮ್ಮ ವಾಹನದಲ್ಲೇ ಕೇರಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಒಟ್ಟು ಬಹುಮಾನದ ಮೊತ್ತ: 25 ಕೋಟಿ ರೂ ಆಗಿದ್ದರೂ, ಅಲ್ತಾಫ್ ಅವರ ಕೈ ಸೇರುವುದು ಎಲ್ಲಾ ಕಡಿತಗಳ ನಂತರ ಒಟ್ಟು 12,88,26,000 (12.8 ಕೋಟಿಗಳು) ಮಾತ್ರ ಆಗಿದೆ. 25 ಕೋಟಿ ಬಹುಮಾನದ ಮೊತ್ತದಲ್ಲಿ ಏಜೆನ್ಸಿ ಕಮಿಷನ್ (10%): 2.5 ಕೋಟಿ ರೂ, ಬಹುಮಾನ ತೆರಿಗೆ (30%): ರೂ 6.75 ಕೋಟಿ ನಂತರ ವಿಜೇತರ ಖಾತೆಗೆ ಜಮಾ ಮಾಡಲಾದ ಮೊತ್ತ (ಕಡಿತಗಳ ನಂತರ): ರೂ 15.75 ಕೋಟಿಗಳು. ಬಳಿಕ ತೆರಿಗೆ ಮೊತ್ತದ ಮೇಲಿನ ಹೆಚ್ಚುವರಿ ಶುಲ್ಕ (37%): ರೂ 2.49 ಕೋಟಿಗಳು. ಆರೋಗ್ಯ ಮತ್ತು ಶಿಕ್ಷಣ ಸೆಸ್ (4%) ರೂ 36.9 ಲಕ್ಷಗಳು, ಕ್ರೆಡಿಟ್ ಮಾಡಿದ ಮೊತ್ತದ ಮೇಲಿನ ಒಟ್ಟು ತೆರಿಗೆ: ರೂ 2.85 ಕೋಟಿಗಳು ಎಲ್ಲಾ ಕಡಿತಗಳ ನಂತರ, ಅದೃಷ್ಟ ವಿಜೇತರು ಸ್ವೀಕರಿಸುವ ಒಟ್ಟು ಮೊತ್ತವು ಸರಿಸುಮಾರು 12,88,26,000 (12.8 ಕೋಟಿಗಳು) ಆಗಿರುತ್ತದೆ ಎಂದು ಕೇರಳ ರಾಜ್ಯದ ಲಾಟರಿ ವಿಭಾಗದವರಿಂದ ಮಾಹಿತಿ ದೊರಕಿದೆ.
0 ಕಾಮೆಂಟ್‌ಗಳು