ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರ ಪ್ರಾಮಾಣಿಕತೆ, ಪಾರದರ್ಶಕತೆ ಮೆಚ್ಚುವಂತಹದು : ಪುಟ್ಟಸಿದ್ದೇಗೌಡ


 ಮೈಸೂರು : ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾದಿಂದ ತಮಗೆ ಶೇ, ೫೦:೫೦ ಅನುಪಾತದಲ್ಲಿ ಬದಲಿಯಾಗಿ ನೀಡಿದ್ದ ೧೪ ನಿವೇಶನಗಳನ್ನು ಮತ್ತೇ ಮುಡಾಕ್ಕೆ ವಾಪಸ್ ನೀಡಿದ್ದು, ಅವರ ಪಾರದರ್ಶಕತೆ, ದೊಡ್ಡಗುಣ ಮೆಚ್ಚುವಂತಹದು ಅವರು ರಾಜ್ಯಕ್ಕೆ ಮಾದರಿಯಾಗಿದ್ದಾರೆಂದು ಮೈಸೂರು ವಕೀಲರ ಸಂಘದ ಮಾಜಿ ಉಪಾಧ್ಯಕ್ಷರಾದ ಪುಟ್ಟಸಿದ್ದೇಗೌಡ ಹೇಳಿದ್ದಾರೆ.

ಮಂಗಳವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ತಮ್ಮ ದಿಟ್ಟ, ಪ್ರಾಮಾಣಿಕ, ಜನಪರ ರಾಜಕಾರಣದಿಂದ ದಿನೇ ದಿನೇ   ಜನಪ್ರಿಯತೆಗಳಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶತಾಯ ಗತಾಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಸಲು ಬಿಜೆಪಿ ಮತ್ತು ಜೆಡಿಎಸ್ ಹೂಡಿರುವ ತಂತ್ರದ ಒಂದು ಭಾಗವೇ ಮುಡಾ ಪ್ರಕರಣ. ವಾಸ್ತವದಲ್ಲಿ ಇದು ಹಗರಣವೇ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರಿಗೆ ಅವರ ತವರು ಮನೆಯಿಂದ ಹಿಂದೂ ಸಂಪ್ರದಾಯದಂತೆ ಅರಿಶಿಣ ಕುಂಕುಮದ ಭಾಗವಾಗಿ ೩ ಎಕರೆ ೧೬ ಕುಂಟೆ ಜಮೀನು ನೀಡಲಾಗಿತ್ತು. ಈ ಜಮೀನು ಮುಡಾ ವಶಪಡಿಸಿಕೊಂಡು, ಕಾನೂನು ಪ್ರಕಾರ ೧೪ ನಿವೇಶನಗಳನ್ನು ನೀಡಿತ್ತು. ಇದನ್ನೆ ದಾಳವಾಗಿಟ್ಟುಕೊಂಡು ಮುಖ್ಯಮಂತ್ರಿಗಳ ವಿರುದ್ಧ ಸಾಧ್ಯವಾದಷ್ಟೂ ಅಪಪ್ರಚಾರ ಮಾಡಲಾಗಿದೆ. ಇದೀಗ ಇಡಿಯನ್ನೂ ಛೂ ಬಿಡಲಾಗಿದೆ. ಇಲ್ಲಿ ಹಣದ ವಹಿವಾಟು ನಡೆದಿಲ್ಲ. ಆದರೂ ಇಡಿ ಪ್ರಕರಣ ದಾಖಲಿಸಿದೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಯಾವ ಮಾರ್ಗ ಸಾಧ್ಯವೋ ಅವೆಲ್ಲವನ್ನೂ ವಿರೋದ ಪಕ್ಷಗಳು ಬಳಸುತ್ತಿವೆ. ಈ ಪ್ರಕರಣದಲ್ಲಿ ಸಿಎಂ ಪತ್ನಿ ಅವರು ತಮ್ಮ ಸೈಟುಗಳನ್ನು ಮುಡಾಕ್ಕೆ ವಾಪಸ್ ಕೊಡುವ ಅನಿವಾರ್ಯತೆ ಇರಲಿಲ್ಲ. ಆದಾಗ್ಯೂ ತಮ್ಮ ಪತಿಯ ವಿರುದ್ಧ ಸಲ್ಲದ ಆರೋಪಗಳು ಬರುತ್ತಿರುವುದನ್ನು ಸಹಿಸದೆ ಬೆಲೆ ಬಾಳುವ ೧೪ ಸೈಟುಗಳನ್ನು ವಾಪಸ್ ಮಾಡಿದ್ದಾರೆ. ಇದು ಅವರ ದೊಡ್ಡಗುಣ. ಕಾನೂನಾತ್ಮಕವಾಗಿ ದಾನವಾಗಿ ಬಂದ ಸೈಟುಗಳಿಂದ ತಮ್ಮ ಪತಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಧಕ್ಕೆ ಬರುತ್ತಿದೆ ಎಂದು ನೊಂದು ಪತ್ರ ಬರೆದು ಸೈಟು ವಾಪಸ್ ಮಾಡಿದ್ದಾರೆ. ಪತ್ರದಲ್ಲಿ ಅವರ ಪಾರದರ್ಶಕತೆ ಎದ್ದು ಕಾಣುತ್ತಿದೆ. ಅವರ ತೀರ್ಮಾನ ಮೆಚ್ಚುವಂತಹದು. ಇದು ಉತ್ತಮವಾದ ನಿರ್ಧಾರ ಸಿಎಂ ಸಿದ್ದರಾಮಯ್ಯ ಅವರ ಪತ್ನಿಯಾಗಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದು ಪುಟ್ಟಸಿದ್ದೇಗೌಡ ಸಿಎಂ ಪತ್ನಿ ಪಾರ್ವತಿಯವರ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು