ಮೈಸೂರು : ಶಾಸಕ ತನ್ವೀರ್ ಸೇಠ್ ಅವರ ಹುಟ್ಟುಹಬ್ಬದ ಪ್ರಯುಕ್ತ ಯೂತ್ ಕಾಂಗ್ರೆಸ್ ಗೌಸಿಯಾನಗರ 32ನೇ ವಾರ್ಡ್ ಅಧ್ಯಕ್ಷ ಜುನೇದ್ ನೇತೃತ್ವದಲ್ಲಿ ಗುರುವಾರ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ದೀನೇ..ಇಸ್ಲಾಂ ಕಮಿಟಿ, ಕ್ಯಾತನಾರನಹಳ್ಳಿ ಮದೀನಾ ಮಸೀದಿ ಆಡಳಿತ ಮಂಡಳಿ ಸದಸ್ಯರು ಹಾಗೂ ಮೈಸೂರು ಮಹಾನಗರಪಾಲಿಕೆಯ ಸ್ವಚ್ಛತಾ ಸಿಬ್ಬಂದಿಗಳು ಇಲ್ಲಿನ ಮುಸ್ಲಿಂ ಖಬರಸ್ಥಾನ್ ಸ್ವಚ್ಛಗೊಳಿಸಿದರು.
ಗುರುವಾರ ಬೆಳಗ್ಗೆ ಸುಮಾರು 6.30ಕ್ಕೆ ಸ್ವಚ್ಛತಾ ಕಾರ್ಯ ಪ್ರಾರಂಭವಾಯಿತು. ನೂರಾರು ಯುವಕರು ಸ್ವಚ್ಛಾತಾ ಕಾರ್ಯದಲ್ಲಿ ಭಾಗವಹಿಸಿ ಗಿಡಗಂಟೆಗಳು, ಮುಳ್ಳಿನ ಗಿಡಗಳು, ಪಾರ್ಥೇನಿಯಂ ಸೇರಿದಂತೆ ಇನ್ನಿತರ ಅನಗತ್ಯ ಗಿಡಗಳನ್ನು ಕಿತ್ತು ಖಬರಸ್ಥಾನ್ ಸ್ವಚ್ಛಗೊಳಿಸಿದರು.
ಈ ಸಂದರ್ಭದಲ್ಲಿ ಜುನೇದ್ ಮಾತನಾಡಿ, ನಮ್ಮ ನೆಚ್ಚಿನ ಶಾಸಕರಾದ ತನ್ವೀರ್ ಸೇಠ್ ಅವರ ಹುಟ್ಟುಹಬ್ಬದಂದು ಯೂತ್ ಕಾಂಗ್ರೆಸ್ ವತಿಯಿಂದ ಒಂದು ಅರ್ಥಪೂರ್ಣ ಕಾರ್ಯಕ್ರಮ ನಡೆಸಬೇಕು ಎಂಬ ಆಲೋಚನೆಯಲ್ಲಿದ್ದಾಗ ಇಲ್ಲಿನ ದೀನೇ..ಇಸ್ಲಾಂ ಕಮಿಟಿ ಮತ್ತು ಕ್ಯಾತನಾರನಹಳ್ಳಿ ಮದೀನಾ ಮಸೀದಿ ಆಡಳಿತ ಮಂಡಳಿಯ ಸಲಹೆ ಮೇರೆಗೆ 32ನೇ ವಾರ್ಡ್‍ನಲ್ಲಿರುವ ಖಬರಸ್ಥಾನ್ ಸ್ವಚ್ಛ ಮಾಡುವುದು ಎಂದು ತೀರ್ಮಾನಿಸಿ ಇಂದು ಸ್ವಚ್ಛತಾಕಾರ್ಯ ಕೈಗೊಂಡಿದ್ದೇವೆ. ಇತ್ತೀಚೆಗೆ ನಿರಂತರವಾಗಿ ಮಳೆ ಸುರಿದ ಕಾರಣ ಖಬರಸ್ಥಾನ್‍ನಲ್ಲಿ ಸಾಕಷ್ಟು ಗಿಡಗಂಟಿಗಳು ಬೆಳೆದಿದ್ದವು. ಮೈಸೂರು ಮಹಾನಗರಪಾಲಿಕೆ ಸ್ವಚ್ಛತಾ ಸಿಬ್ಬಂದಿಗಳ ಸಹಯೋಗದೊಂದಿಗೆ ಯೂತ್ ಕಾಂಗ್ರೆಸ್ ಈ ಸ್ವಚ್ಛತಾ ಕಾರ್ಯ ನಡೆಸಿದೆ. ಯುವಕರು ಅತ್ಯಂತ ಸಂತೋಷದಿಂದ ಈ ಕಾರ್ಯದಲ್ಲಿ ಪಾಲ್ಗೊಂಡು ಶ್ರಮದಾನ ಮಾಡಿದ್ದಾರೆ.ಅವರೆಲ್ಲರಿಗೂ ಅಭಿನಂದನೆಗಳು ಎಂದರು.
ಖಬರಸ್ಥಾನ್‍ನಲ್ಲಿ ವಿದ್ಯುತ್ ತಂತಿಗಳ ಮೇಲೆ ಮರದ ಕೊಂಬೆಗಳು ಬಿದ್ದು ಸಾಕಷ್ಟು ಅನಾನುಕೂಲ ಉಂಟಾಗಿದೆ. ಇಲ್ಲಿ ಎರಡು ಹೈಮಾಸ್ಟ್ ವಿದ್ಯುತ್ ಬಲ್ಬ್‍ಗಳನ್ನು ಹಾಕಿಸಬೇಕು ಮತ್ತು ಪಾದಚಾರಿ ಮಾರ್ಗದಲ್ಲಿ ಇಂಟರ್‍ಲಾಕ್‍ಗಳು ಹಾಳಾಗಿವೆ ಇವುಗಳನ್ನು ದುರಸ್ತಿ ಮಾಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಲಾಗಿದೆ. ಅವರು ಈ ಎರಡೂ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತಾರೆ ಎಂಬ ನಂಬಿಕೆ ನಮಗಿದೆ ಎಂದರು.
ಈ ಸಂದರ್ಭದಲ್ಲಿ ಮದೀನಾ ಮಸೀದಿ ಕಾರ್ಯದರ್ಶಿ ಸುಹೇಲ್ ಪರ್ವಿಜ್, ಯುವ ಮುಖಂಡರಾದ ಬಶೀರ್, ಮೊಹಮ್ಮದ್ ಅಲೀಂ, ಸದ್ದಾಂ ಹುಸೇನ್, ಇರ್ಫಾನ್ ಖಾನ್, ಮೊಹಮ್ಮದ್ ಸಾದಿಖ್, ವಸೀಂ ಅಕ್ರಂ, ಸಿದ್ದಿಖ್ ಪಾಷ ಖಬರಸ್ಥಾನ್ ಉಸ್ತುವಾರಿಗಳಾದ ಮೊಹಮ್ಮದ್‍ಹನೀಫ್ (ಬಾಘ್‍ದಾ) ಮುಂತಾದವರು ಇದ್ದರು.
0 ಕಾಮೆಂಟ್‌ಗಳು