ನವರಾತ್ರಿ, ಮೈಸೂರು ದಸರಾ ಪ್ರಯುಕ್ತ ಮೈಸೂರು ಜಿಲ್ಲಾ ಸ್ಪೋಟ್ರ್ಸ್ ಕರಾಟೆ ಅಸೋಸಿಯೇಷನ್‍ನಿಂದ 2ನೇ ರಾಜ್ಯಮಟ್ಟದ ಮುಕ್ತ ಕರಾಟೆ ಪಂದ್ಯಾವಳಿ


 ಮೈಸೂರು : ಮೈಸೂರು ಜಿಲ್ಲಾ ಸ್ಪೋಟ್ರ್ಸ್ ಕರಾಟೆ ಅಸೋಸಿಯೇಷನ್‍ನಿಂದನವರಾತ್ರಿ, ಮೈಸೂರು ದಸರಾ ಪ್ರಯುಕ್ತ 2ನೇ ರಾಜ್ಯಮಟ್ಟದ ಮುಕ್ತ ಕರಾಟೆ ಪಂದ್ಯಾವಳಿಗೆ ಸೋಮವಾರ ಚಾಲನೆ ನೀಡಲಾಯಿತು.

ನಗರದ ವರ್ಜಿನ್ ಆಫ್ ದ ಪೂರ್ ಚರ್ಚ್‍ನ ಸಭಾಂಗಣದಲ್ಲಿ ಹೆಸರಾಂತ ಕರಾಟೆ ಕೋಚ್ ರ್ಯಾಂಬೋ ಕಿರಣ್ ನೇತೃತ್ವದಲ್ಲಿ ಆಯೋಜಿದ್ದ ಕರಾಟೆ ಪಂದ್ಯಾವಳಿಗೆ ಮೇಲುಕೋಟೆ ವಂಗೀಪುರ ನಂಬೀ ಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ಚಾಲನೆ ನೀಡಿದರು.

ಬಳಿಕ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಆತ್ಮ ರಕ್ಷಣೆಗಾಗಿ ಕರಾಟೆ ಕಲೆಯನ್ನು ಕಲಿಯುತ್ತಿರುವುದು ಅತ್ಯಂತ ಸಂತಸದ ವಿಷಯವಾಗಿದೆ. ಮಕ್ಕಳು ಹಿರಿಯರ ಮಾತಿಗೆ ಗೌರವ ಕೊಟ್ಟು ತಾಳ್ಮೆಯಿಂದ ಅವರ ಮಾತನ್ನು ಆಲಿಸಿ ಮುಂದಿನ ಜೀವನ ರೂಪಿಸಿಕೊಳ್ಳಬೇಕು. ತಂದೆ ತಾಯಿಯರಿಗೆ ಗೌರವ ಕೊಡಬೇಕು. ತಾವು ಕಲಿಯುತ್ತಿರುವ ಶಾಲೆ, ಶಿಕ್ಷಕರು, ಪೋಷಕರು, ಸಮಾಜ ಮತ್ತು ದೇಶಕ್ಕೆ ಕೀರ್ತಿ ತರುವಂತರಾಗಬೇಕೆಂದು ಸಲಹೆ ನೀಡಿದರು.

ಲಯನ್ ಡಾ.ಎಸ್.ವೆಂಕಟೇಶ್ ಮಾತನಾಡಿ, ಕರಾಟೆ ಎನ್ನುವುದು ಯಾವುದೇ ಆಯುಧವನ್ನು ಹಿಡಿಯದೆ ತಮ್ಮ ಆತ್ಮ ರಕ್ಷಣೆಯನ್ನು ಮಾಡಿಕೊಳ್ಳಬಹುದಾದ ಒಂದು ಅದ್ಭುತವಾದ ಕಲೆಯಾಗಿದೆ. ಇಂದಿನ ದಿನಗಳಲ್ಲಿ ಗಂಡು, ಹೆಣ್ಣು ಭೇದವಿಲ್ಲದೇ ಈ ಕಲೆ ಕಲಿಯುವುದು ಅತ್ಯಾವಶ್ಯಕವಾಗಿದೆ. ಇದಕ್ಕೆ ಪೋಷಕರ ಪ್ರೋತ್ಸಾಹವೂ ಅಗತ್ಯವಾಗಿದೆ. ಕರಾಟೆ ಕಲಿಯುವವರಿಗೆ ಆತ್ಮವಿಶ್ವಾಸ ಇರಬೇಕು. ತಾನು ಶಕ್ತಿಶಾಲಿ, ಧೈರ್ಯವಂತ ಎನ್ನನ್ನೂ ಬೇಕಾದರೂ ಎದುರಿಸಬಲ್ಲೆ ಎಂಬ ವಿಶ್ವಾಸ ಮೂಡಿದ್ದಲ್ಲಿ ಎದುರಾಳಿಯ ಎದೆ ನಡುಗಿಸುವುದು ಸುಲಭ ಎಂದು ಹೇಳಿದರು.

ಡಿಆರ್‍ಡಿಒ ಮಾಜಿ ಮುಖ್ಯ ಪಿಆರ್‍ಒ ಜಯಪ್ರಕಾಶ್ ರಾವ್ ಮಾತನಾಡಿ, 

ಕರಾಟೆ ಜಗತ್ತಿನ ಜನಪ್ರಿಯ ಸ್ವಯಂ ರಕ್ಷಣಾ ಕಲೆಯಾಗಿದೆ. ಸಾಕಷ್ಟು ಹೆಣ್ಣು ಮಕ್ಕಳು ಇದನ್ನು ಕಲಿತು ಸಾಧನೆ ಮಾಡುವ ಮೂಲಕ ಇದುವರೆಗೂ ಕೇವಲ ಶೈಕ್ಷಣಿಕ ಫಲಿತಾಂಶದಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಎಂಬ ವಿಚಾರದ ಜತೆ ಇನ್ನು ಮುಂದೆ ಕರಾಟೆಯಲ್ಲೂ ಹೆಣ್ಣು ಮಕ್ಕಳೇ ಮೇಲುಗೈ ಎಂಬುದನ್ನು ಕಾಣಬಹುದಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ಮಲೇಷಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‍ಷಿಪ್‍ನಲ್ಲಿ ಚಿನ್ನದ ಪದಕ ಗಳಿಸಿದ ಮೈಸೂರಿನ ಹೆಸರಾಂತ ಕರಾಟೆ ಕೋಚ್, ರ್ಯಾಂಬೋ ಕಿರಣ್ ಮತ್ತು ಪವಿತ್ರ ದಂಪತಿ ಪುತ್ರಿ ಅಪೇಕ್ಷಾ ಆರ್.ಕಿರಣ್ ಅವರು ಕರಾಟೆ ಪ್ರದರ್ಶನ ನೀಡಿದರು. ಈ ವೇಳೆ ಅವರನ್ನು ಗೌರವಿಸಲಾಯಿತು.

ಸಮಾರಂಭದ ನಿರೂಪಣೆಯನ್ನು ಹೆಸರಾಂತ ಕರಾಟೆ ಕೋಚ್ ರ್ಯಾಂಬೋ ಕಿರಣ್ ನಡೆಸಿಕೊಟ್ಟರು.

ವೇದಿಕೆಯಲ್ಲಿ ಮೈಸೂರು ಮಹಾನಗರಪಾಲಿಕೆ ಮಾಜಿ ಸದಸ್ಯ ಅಜ್ಜು, ಕರಾಟೆ ಮಾಸ್ಟರ್ ಚಿದಾನಂದ, ಸೈನಿಕರಾದ ಮಾಲತೇಷ್, ಎಂಡಿಎಸ್‍ಕೆಎ ಉಪಾಧ್ಯಕ್ಷರಾದ ಲೋಕೇಶ್, ಸದಸ್ಯರಾದ ಮಾದೇಶ, ಗುರು ಪ್ರಸಾದ್,ಅಶೋಕ್ ಪ್ರಧಾನ್, ಮನು ಕೆ., ಮುಸವೀರ್ ಪಾಷ, ರಾಯಪ್ಪ, ದಯಾನಂದ ಮುಂತಾದವರು ಇದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು