ಮೈಸೂರು : ಉನ್ನತ ಶಿಕ್ಷಣ ಪಡೆಯಲು ಬಯಸುವ ಸರ್ಕಾರಿ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವ್ಯಾಸಂಗ ಮಾಡಿದ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ
ಶೈಕ್ಷಣಿಕ ನೆರವು ಒದಗಿಸುವ 9ನೇ ಆವೃತ್ತಿಯ ಸಂತೂರ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಬುಧವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿಪೆÇ್ರೀ ಕನ್ಸ್ಯೂಮರ್ ಕೇರ್ ಮತ್ತು ಲೈಟಿಂಗ್ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ನಿರಜ್ ಖಾತ್ರಿ ಮಾತನಾಡಿ, ಈ ವರ್ಷ ಸಂತೂರ್ ವಿದ್ಯಾರ್ಥಿ ವೇತನವು ಅಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಛತ್ತೀಸ್‍ಗಢ ರಾಜ್ಯಗಳ 1,500ರಷ್ಟು ಅರ್ಹ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನದ ನೆರವು ಒದಗಿಸಲಾಗುತ್ತಿದೆ.
ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದಿರುವ, ತಂದೆ ಅಥವಾ ತಾಯಿ ಇಲ್ಲದ, ವಿದ್ಯಾರ್ಥಿನಿಯರ ಉನ್ನತ ವ್ಯಾಸಂಗಕ್ಕಾಗಿ ಈ ನೆರವು ನೀಡಲಾಗುತ್ತಿದೆ. ಎಸ್‍ಸಿ, ಎಸ್‍ಟಿ, ಓಬಿಸಿ, ಅಲ್ಪಸಂಖ್ಯಾತ ಮತ್ತಿತರ ಸಮುದಾಯದ ಹೆಣ್ಣು ಮಕ್ಕಳು ಅರ್ಜಿ ಸಲ್ಲಿಸಬಹುದು.
ಈ ಯೋಜನೆಗೆ ಒಟ್ಟು 150 ಕೋಟಿಗೂ ಹೆಚ್ಚು ಮೊತ್ತವನ್ನು ವಿತರಿಸಲಾಗಿದೆ, ಈ ವರ್ಷವೇ 110 ಕೋಟಿಗೂ ಹೆಚ್ಚು ವಿದ್ಯಾರ್ಥಿ ವೇತನ ವಿತರಿಸಲಾಗುತ್ತದೆ ಎಂದು ಹೇಳಿದರು.
ಹೆಣ್ಣು ಮಕ್ಕಳು ಸಮಾಜದಲ್ಲಿ ಸಮಾನತೆ ಮತ್ತು ಸುಸ್ಥಿರ ಅಭಿವೃದ್ಧಿ ಸಾಧಿಸಲು ಶಿಕ್ಷಣವೇ ಪ್ರಧಾನವಾಗಿದೆ ಮತ್ತು ಮೂಲಾಧಾರವಾಗಿದೆ. ಈ ವಿದ್ಯಾರ್ಥಿವೇತನ ಯೋಜನೆಯ ಮೂಲಕ ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿರುವ ಹುಡುಗಿಯರಿಗೆ ಆರ್ಥಿಕ ನೆರವು ನೀಡಿ ಅವರಿಗೆ ಹೈಸ್ಕೂಲ್ ಮತ್ತು ಕಾಲೇಜಿನ ನಡುವೆ ಇರುವ ಕಂದಕವನ್ನು ದಾಟಲು ಸಹಾಯ ಮಾಡುತ್ತೇವೆ. ಇದೊಂದು ಬಹಳ ಮಹತ್ವದ ಘಟ್ಟವಾಗಿದ್ದು,
ಇಲ್ಲಿ ಏನು ಮಾಡುತ್ತಾರೆ ಅನ್ನುವುದರಿಂದ ಜೀವನದ ಮುಂದಿನ ಹಾದಿ ನಿರ್ಧಾರವಾಗುತ್ತದೆ. ನಾವು ಸಂತೂರ್ ವಿದ್ಯಾರ್ಥಿವೇತನ ಯೋಜನೆಯ 9ನೇ ಆವೃತ್ತಿಯನ್ನು ಹೆಮ್ಮೆಯಿಂದ ಪ್ರಾರಂಭಿಸುತ್ತಿದ್ದೇವೆ ಎಂದರು.
2016-17ರಲ್ಲಿ ಸಂತೂರ್ ವಿದ್ಯಾರ್ಥಿವೇತನ ಯೋಜನೆಯನ್ನು ಮೊದಲಬಾರಿಗೆ ಆಯೋಜಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಈ ಯೋಜನೆ ಮೂಲಕ 8,000ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಮತ್ತು ಅವರ ಶೈಕ್ಷಣಿಕ ಆಕಾಂಕ್ಷೆ ಪೂರೈಸಿಕೊಳ್ಳಲು ನೆರವು ಒದಗಿಸಿದೆ. ವಿಶೇಷವೆಂದರೆ ಈ ವಿದ್ಯಾರ್ಥಿನಿಯರಲ್ಲಿ 5,500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಭಿವೃದ್ಧಿಶೀಲ ಜಿಲ್ಲೆಗಳಿಂದ ಬಂದವರಾಗಿದ್ದಾರೆ. ಈ ಮೂಲಕ ಸಂಸ್ಥೆಯು ಅಭಿವೃದ್ಧಿ ಅಗತ್ಯವಿರುವ ಸಮುದಾಯಗಳಿಗೆ ನಿರಂತರವಾಗಿ ಶಕ್ತಿ ತುಂಬಲು ಯತ್ನಿಸುತ್ತಿದೆ. ಈವರೆಗೆ ಕರ್ನಾಟಕದಲ್ಲಿ ಈ ಯೋಜನೆ ಮೂಲಕ 2,700ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ನೆರವು ನೀಡಲಾಗಿದೆ. ಅದರಲ್ಲಿ 1500ಕ್ಕೂ ಹೆಚ್ಚು ಮಂದಿ ಅಭಿವೃದ್ಧಿಶೀಲ ಜಿಲ್ಲೆಗಳ ವಿದ್ಯಾರ್ಥಿನಿಯರು ಎಂಬುದು ವಿಶೇಷ. ಅದೇ ರೀತಿ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ 2,500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪ್ರಯೋಜನ ಪಡೆದಿದ್ದು, ಅವರಲ್ಲಿ 1,500ಕ್ಕೂ ಹೆಚ್ಚು ಮಂದಿ ಅಭಿವೃದ್ಧಿಶೀಲ ಜಿಲ್ಲೆಗಳಿಂದ ಬಂದವರಾಗಿದ್ದಾರೆ. ಛತ್ತೀಸ್‍ಗಢದಲ್ಲಿ ಎರಡು ವರ್ಷಗಳ ಹಿಂದೆ ಈ ಯೋಜನೆಯನ್ನು ಆರಂಭಿಸಲಾಗಿತ್ತು. ಅಲ್ಲಿ ಈವರೆಗೆ
700 ವಿದ್ಯಾರ್ಥಿನಿಯರು ನೆರವು ಪಡೆದಿದ್ದಾರೆ. ಅದರಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಭಿವೃದ್ಧಿಶೀಲ ಜಿಲ್ಲೆಗಳಿಂದ ಬಂದವರಾಗಿದ್ದಾರೆ. ಈ ಅಂಕಿಅಂಶಗಳು ಭಾರತದ ಅಭಿವೃದ್ಧಿಶೀಲ ಪ್ರದೇಶಗಳ ವಿದ್ಯಾರ್ಥಿನಿಯರ ಶಿಕ್ಷಣದ ಅದ್ಭುತ ಶಕ್ತಿಯನ್ನು ನಾವು ನೋಡುತ್ತಿದ್ದೇವೆ. ಹಾಗಾಗಿ ವಿದ್ಯಾರ್ಥಿನಿಯರು ತಮ್ಮ ಕನಸು ನನಸು ಮಾಡಲು ನೆರವು ನೀಡುವುದನ್ನು ಮುಂದುವರಿಸುವುದು ನಮ್ಮ ಗುರಿಯಾಗಿದೆ ಎಂದರು.
ಸಂತೂರ್ ವಿದ್ಯಾರ್ಥಿವೇತನ ಯೋಜನೆಗೆ ಆಗಸ್ಟ್ 21, 2024 ರಿಂದ ಸೆಪ್ಟೆಂಬರ್ 30, 2024ರವರೆಗೆ ಅರ್ಜಿ
ಸಲ್ಲಿಸಬಹುದಾಗಿದೆ. ಅರ್ಜಿದಾರರು ಹೆಚ್ಚಿನ ಸಹಾಯಕ್ಕಾಗಿ ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು
7337835166 (200), 7411654395/74116541395/74116541395/74116541394 ಕರೆ ಮಾಡಬಹುದು.
0 ಕಾಮೆಂಟ್‌ಗಳು