ವರದಿ : ನಜೀರ್ ಅಹಮದ್
ಮೈಸೂರು : ದಲಿತರಿಗೆ ಸೇರಿದ, ಯಾವುದೇ ತಂಟೆ ತಕರಾರಿಲ್ಲದ ಬೆಲೆ ಬಾಳುವ ಭೂಮಿಯನ್ನು ಕಬಳಿಸಲು ಪ್ರಭಾವಿ ವ್ಯಕ್ತಿಗಳು, ರಾಜಕಾರಣಿಗಳು, ಮರಿ ಪುಢಾರಿಗಳು ಒಟ್ಟಾಗಿ ಸೇರಿ ಭೂ ಮಾಲಿಕರಿಗೆ ಫೋನ್ ಮಾಡಿ ಬೆದರಿಸುವುದು, ಖಾತೆ ಮಾಡದಂತೆ ಪಾಲಿಕೆ ಅಧಿಕಾರಿಗಳಿಗೆ ಒತ್ತಡ ತರುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಭಾನುವಾರ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭೂಮಾಲಿಕರ ಪರವಾಗಿ ಹಿರಿಯ ವಕೀಲರಾದ ಶ್ಯಾಂಭಟ್ ಪ್ರಕರಣ ಕುರಿತು ಬೆಳಕು ಚೆಲ್ಲಿದ್ದಾರೆ.
1963ರಲ್ಲಿ ರಾಮಯ್ಯ, ಪಿ.ತಿಮ್ಮಯ್ಯ ಎಂಬವರಿಗೆ ಮೈಸೂರು ತಾಲ್ಲೂಕು ಕಸಬಾ ಹೋಬಳಿ, ಹಿನಕಲ್ ಗ್ರಾಮದ ಸರ್ವೆ ನಂ. 155 ರಲ್ಲಿ ತಲಾ 10 ಎಕರೆ 3 ಗುಂಟೆ ಜಮೀನನ್ನು ಇಲ್ಲಿನ
ತಹಶೀಲ್ದಾರರು ದರಖಾಸ್ತು ಮೂಲಕ ಮಂಜೂರು ಮಾಡಿ ಗ್ರಾಂಟ್ ಸರ್ಟಿಫಿಕೇಟ್ ನೀಡಿರುತ್ತಾರೆ.
ಈ ಜಮೀನಿಗೆ ಪ್ರತ್ಯೇಕ ಪೆÇೀಡಿಯಾಗಿ ಸರ್ವೆ ನಂ. 155/ಎ ಎಂದು 10 ಎಕರೆ 3 ಗುಂಟೆ ಪ್ರದೇಶಕ್ಕೆ ತಹಶೀಲ್ದಾರರು ಆದೇಶ ಮಾಡಿರುತ್ತಾರೆ. ಅಲ್ಲದೇ ಇದೇ ಸರ್ವೆ ನಂ. 155ರಲ್ಲಿ
ತಿಮ್ಮಯ್ಯ ನವರಿಗೆ ಗ್ಯಾಂಟ್ ಆಗಿರುವ 10 ಎಕರೆ 03 ಗುಂಟೆ ಪ್ರದೇಶವನ್ನು ಬಿಟ್ಟು ಉಳಿಕೆ ಸ್ವತ್ತು ರಾಮಯ್ಯ ನವರಿಗೆ ಗ್ರಾಂಟ್ ಆಗಿರುತ್ತದೆ.
ಬಳಿಕ ಇಬ್ಬರು ಫಲಾನುಭವಿಗಳಿಗೂ ರೆವಿನ್ಯೂ ಖಾತೆ, ಇಂಡೆಕ್ಸ್ ಆಫ್ ಲ್ಯಾಂಡ್, ರೆಕಾಡ್ರ್ಸ್ ಆಫ್ ರೈಟ್ ಮತ್ತು ಆರ್.ಟಿ.ಸಿ. ಯಲ್ಲಿ ದಾಖಲಾಗಿರುತ್ತದೆ.
ತದ ನಂತರ ರಾಮಯ್ಯ, ಮತ್ತು ತಿಮ್ಮಯ್ಯ ಅವರವರ ಪಾಲಿಗೆ ಗ್ರಾಂಟ್ ಆಗಿರುವ ಜಮೀನುಗಳನ್ನು ಭೂ ಪರಿವರ್ತನೆ ಮಾಡಿಸಿದ್ದು, ಹಿನಕಲ್ ಮಂಡಲ ಪಂಚಾಯಿತಿಯವರು ರಾಮಯ್ಯ ಮತ್ತು ತಿಮ್ಮಯ್ಯ ನವರ ಹೆಸರಿಗೆ ಪ್ರತ್ಯೇಕ ಖಾತೆಗಳನ್ನು ಮಾಡಿರುತ್ತಾರೆ.
ಈ ನಡುವೆ ರಾಮಯ್ಯ ಮತ್ತು ತಿಮ್ಮಯ್ಯ ರವರ ಪೂರ್ತಾ ಜಮೀನು ಹಿನಕಲ್ ಸರ್ವೆ ನಂ. 155 ಮೈಸೂರು ನಗರಪಾಲಿಕೆಯ ಒಳಗಡೆ ಬಂದ ನಂತರ ಮೈಸೂರು ನಗರಪಾಲಿಕೆಯಿಂದಲೂ ಪ್ರತ್ಯೇಕ ಖಾತೆಯನ್ನು ಮಾಡಿಸಿಕೊಂಡಿರುತ್ತಾರೆ.
ಇಬ್ಬರು ತೆರಿಗೆಯನ್ನೂ ಪಾವತಿಸಿದ್ದಾರೆ. ಈ ನಡುವೆ ರಾಮಯ್ಯನವರು ತೀವ್ರ ಅನಾರೋಗ್ಯದಿಂದ 2000ನೇ ಇಸವಿಯಲ್ಲಿ
ಮರಣ ಹೊಂದಿದರು. ಅವರ ಮಕ್ಕಳು ತಮ್ಮ 10 ಎಕರೆ ಜಮೀನಿನ ಸ್ವಾಧೀನದಲ್ಲಿದ್ದರು. ಸ್ವತ್ತಿಗೆ ಕಂದಾಯವನ್ನು ಕಟ್ಟುತ್ತಿದ್ದಾರೆ. ಆದರೆ, ಕಾರಣಾಂತರದಿಂದ ಈ ಸ್ವತ್ತಿನ ಪೌತಿ ಖಾತೆಯನ್ನು ಮಾಡಿಕೊಂಡಿರಲಿಲ್ಲ.
ಬಳಿಕ ರಾಮಯ್ಯ ನವರ ಕುಟುಂಬದವರು ನಗರಪಾಲಿಕೆಗೆ ಪೌತಿಖಾತೆಗೆ ಅರ್ಜಿ ಸಲ್ಲಿಸಿದ್ದು, ದಾಖಲೆ ಪರಿಶೀಲಿಸಿದ ಪಾಲಿಕೆ ಅಧಿಕಾರಿಗಳು ಪೌತಿ ಖಾತೆಯನ್ನು ಮಾಡಿರುತ್ತಾರೆ ಎಂದರು.
ನಗರದ ಹೃದಯ ಭಾಗದಲ್ಲಿ 10 ಎಕರೆ ಜಮೀನು ಒಂದು ದಲಿತ ಕುಟುಂಬಕ್ಕೆ ಸೇರಿದ್ದನ್ನು ಸಹಿಸದ ಪ್ರಭಾವಿಗಳು, ರಾಜಕಾರಣಿಗಳು, ಹೋರಾಟಗಾರರ ಸೋಗಿನಲ್ಲಿರುವ ವ್ಯಕ್ತಿಗಳು ಮುಡಾ ಹಗರಣ ಮುಂದಿಟ್ಟುಕೊಂಡು ಇದನ್ನು ಅಕ್ರಮ ಖಾತೆ ಎಂದು ಹುಯಿಲೆಬ್ಬಿಸಿ ಮಾಧ್ಯಮಗಳಿಗೂ ತಪ್ಪು ಮಾಹಿತಿ ನೀಡಿ, ಸದರಿ ಖಾತೆಯನ್ನು ಅಮಾನತ್ತಿನಲ್ಲಿ ಇಡಿಸಿ ದಲಿತ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿದ ಶ್ಯಾಂಭಟ್,
ಇದು ಸಂಪೂರ್ಣ ರಾಜಕೀಯ ದುರುದ್ದೇಶದಿಂದ ಕೂಡಿದೆ.
ಹಲವಾರು ವ್ಯಕ್ತಿಗಳು ಪರಿಶಿಷ್ಟ ವರ್ಗದ ಜನರಿಗೆ ಸರ್ಕಾರದಿಂದ ಮಂಜೂರಾಗಿರುವ ಸ್ವತ್ತುಗಳನ್ನು ಅತಿಕ್ರಮಿಸಿ
ದುರ್ಲಾಭ ಪಡೆಯಲು ಹೊಂಚುಹಾಕುತ್ತಿದ್ದು, ಸಧ್ಯ ಮುಡಾ ಹಗರಣಗಳನ್ನು ಮುಂದಿಟ್ಟುಕೊಂಡು ನ್ಯಾಯಯುತವಾಗಿ ನಡೆದಿರುವ ಪೌತಿಖಾತೆಯನ್ನೂ ಸಹ ಅಮಾನತ್ತಿನಲ್ಲಿಟ್ಟಿದ್ದಾರೆ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿಯೂ ಅವರು ಹೇಳಿದರು.
ರೈತ ಮುಖಂಡರಾದ ಸರಗೂರು ನಟರಾಜು ಮಾತನಾಡಿ, ಹಿಂದುಳಿದ ವರ್ಗದ ನಾಯಕನ ಸೋಗಿನಲ್ಲಿರುವ ವ್ಯಕ್ತಿಯೊಬ್ಬರು ದಲಿತರ ಜಮೀನು ಕಬಳಿಸಲು ಸಂಚು ರೂಪಿಸಿದ್ದಾರೆ. ಅವರಿಗೂ ದಲಿತರ ಭೂಮಿಗೂ ಯಾವ ಸಂಬಂಧ. ಅವರ್ಯಾಕೆ ಮಧ್ಯಸ್ಥಿಕೆ ವಹಿಸಬೇಕು. ಜಮೀನು ವಾರಸುದಾರ ರಾಮಯ್ಯ ಅವರ ಮಗ ಸುರೇಶ್ ಅವರಿಗೆ ಫೋನ್ ಮಾಡಿ ಬೆದರಿಸುವುದು ಮಾಡುತ್ತಿದ್ದಾರೆ. ಪ್ರಾಣ ಭಯದಿಂದ ಈ ಬಗ್ಗೆ ದೂರು ಕೊಡಲು ಈ ಕುಟುಂಬ ಹಿಂದೇಟು ಹಾಕುತ್ತಿದೆ. ಈ ಕುಟುಂಬಕ್ಕೆ ತೊಂದರೆ ನೀಡುವುದು ಮುಂದುವರಿದರೆ ರೈತಸಂಘದಿಂದ ಹೋರಾಟ ನಡೆಸುತ್ತೇವೆ ಮತ್ತು ಯಾವುದೇ ವ್ಯಕ್ತಿ ಈ ಆಸ್ತಿಗಳನ್ನು ಲಪಟಾಯಿಸಲು ಮುಂದಾದರೆ ಅವರ ವಿರುದ್ಧ ದಲಿತರ ಮೇಲಿನ ದೌಜ್ಯನ್ಯ ಕಾಯ್ದೆ ಪ್ರಕಾರ ದೂರು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಮಯ್ಯ ಕುಟುಂಬದವರಾದ ತುಳಸಮ್ಮ, ಯೋಗೇಶ್, ಸ್ವಾಮಿ, ಭಾಗ್ಯಮ್ಮ, ಗಣೇಶ, ಸುರೇಶ್ ಮುಂತಾದವರು ಇದ್ದರು.
0 ಕಾಮೆಂಟ್‌ಗಳು