ಕೆನ್ನಾಳು ಗ್ರಾಪಂ ಉಪಾಧ್ಯಕ್ಷರಾಗಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಗೀತಾ ವಿಶ್ವನಾಥ್ ಜಯಭೇರಿ

ಪಾಂಡವಪುರ : ತಾಲ್ಲೂಕಿನ ಕೆನ್ನಾಳು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಗೀತಾ ವಿಶ್ವನಾಥ್ 15 ಮತಗಳನ್ನು ಪಡೆದು ತಮ್ಮ ವಿರುದ್ಧ ಸ್ಪರ್ಧಿಸಿದ್ದ ರಜನಿ ಅವರನ್ನು 10 ಮತಗಳ ಅಂತರದಿಂದ ಸೋಲಿಸಿ ಜಯಭೇರಿ ಬಾರಿಸಿದರು.
ಗುರುವಾರ ಬೆಳಗ್ಗೆ ನಡೆದ ಉಪಾಧ್ಯಕ್ಷರ ಚುನಾವಣೆಗೆ ಮೈತ್ರಿ ಅಭ್ಯರ್ಥಿಯಾಗಿ ಗೀತಾ ವಿಶ್ವನಾಥ್, ರೈತಸಂಘ ಬೆಂಬಲಿತ ಅಭ್ಯರ್ಥಿಯಾಗಿ ರಜನಿ ನಾಮಪತ್ರ ಸಲ್ಲಿಸಿದ್ದರು.
22 ಸದಸ್ಯರ ಬಲಾಬಲ ಹೊಂದಿರುವ ಕೆನ್ನಾಳು ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷರ ಚುನಾವಣೆಗೆ ನಡೆದ ಮತದಾನದಲ್ಲಿ 21 ಸದಸ್ಯರು ಮತ ಚಲಾಯಿಸಿದರು. ಗೀತಾ ವಿಶ್ವನಾಥ್ 15 ಮತ ಪಡೆದರೆ, ರಜನಿ 5 ಮತಗಳನ್ನು ಮಾತ್ರ ಪಡೆದರು. ಒಂದು ಮತ ತಿರಸ್ಕøತವಾಗಿ, ಮತ್ತೊಬ್ಬ ಸದಸ್ಯರು ಗೈರಾಗಿದ್ದರು.  

ಫಲಿತಾಂಶ ಘೊಷಣೆ ಬಳಿಕ ಎನ್‍ಡಿಎ ಮುಖಂಡರು, ಸದಸ್ಯರು ವಿಜಯೋತ್ಸವ ಆಚರಿಸಿ ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿ ಸಿಹಿ ಹಂಚಿದರು. 
ಈ ಸಂದರ್ಭದಲ್ಲಿ ಕೆನ್ನಾಳು ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರಕಾಶ್, ನೂತನ ಉಪಾಧ್ಯಕ್ಷೆ ಗೀತಾ ವಿಶ್ವನಾಥ್, ಮಾಜಿ ಅಧ್ಯಕ್ಷರಾದ ರುದ್ರೇಶ್, ಶ್ವೇತಾ, ಮಾಜಿ ಉಪಾಧ್ಯಕ್ಷರಾದ ನಂದೀಶ್, ದೇವಿಕಾ, ಸದಸ್ಯರಾದ ರಾಮಣ್ಣ, ಭಾಸ್ಕರ, ಜ್ಞಾನೇಶ, ಕೆ.ಟಿ.ಪ್ರಕಾಶ್, ಜಯಲಕ್ಷ್ಮಮ್ಮ, ಸಿಂಧು, ಕಾಂತರಾಜು, ಲೀಲಾ ಮುಖಂಡರಾದ ಶಿವಲಿಂಗೇಗೌಡ, ವಿಎಸ್‍ಎಸ್‍ಎನ್ ಅಧ್ಯಕ್ಷ ದೊಡ್ಡೇಗೌಡ, ಮಂಜು, ವೇಣು, ಲೋಕೇಶ್‍ಗೌಡ, ಎಂ.ಸ್ವಾಮಿ, ಕೆಟಿ ವಿಶ್ವನಾಥ್, ವಿಜಯಕುಮಾರ್, ಕೆಟಿ ಪ್ರಕಾಶ್, ದಿವಾಕರ, ಕೃಷ್ಣ, ರಾಜು, ಅಂಜನ ಕುಮಾರ್, ಅನಿಲ್, ಮುಂತಾದವರು ಇದ್ದರು. 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು