ಸರಸ್ವತಿ ಚಾರಿಟಬಲ್ ಟ್ರಸ್ಟ್‌ನ ಮೂರನೇ ವರ್ಷದ ಸಂಭ್ರಮಾಚರಣೆ : ಹೆಸರಾಂತ ವಕೀಲರಾದ ಎಸ್. ಉಮೇಶ್ ಹುಟ್ಟುಹಬ್ಬ ಆಚರಣೆ

ವರದಿ-ನಜೀರ್ ಅಹಮದ್
ಮೈಸೂರು : ನಗರದ ಹೂಟಗಳ್ಳಿಯಲ್ಲಿರುವ ಸರಸ್ವತಿ ಚಾರಿಟಬಲ್ ಟ್ರಸ್ಟ್‌ನ ಮೂರನೇ ವರ್ಷದ ಸಂಭ್ರಮಾಚರಣೆ ಹಾಗೂ ಟ್ರಸ್ಟ್ ಅಧ್ಯಕ್ಷರು ಹಾಗೂ ಮೈಸೂರು ಜಿಲ್ಲಾ ವಕೀಲರ ಸಂಘದ ಮಾಜಿ ಕಾರ್ಯದರ್ಶಿಯೂ ಆದ ಹೆಸರಾಂತ ವಕೀಲ ಎಸ್.ಉಮೇಶ್ ಅವರ ಹುಟ್ಟುಹಬ್ಬವನ್ನು ಟ್ರಸ್ಟ್ ಕಚೇರಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಭಾನುವಾರ ಸಂಜೆ ಟ್ರಸ್ಟ್ ಕಚೇರಿಗೆ ಆಗಮಿಸಿದ ಎಸ್.ಉಮೇಶ್ ಅವರನ್ನು ಟ್ರಸ್ಟ್ ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಕೇಕ್ ಕತ್ತರಿಸಲಾಯಿತು.

ಈ ಸಂದರ್ಭದಲ್ಲಿ ವಕೀಲರಾದ ಎಸ್.ಉಮೇಶ್ ಮಾತನಾಡಿ, ಸರಸ್ವತಿ ಅವರು ಈ ಟ್ರಸ್ಟ್ ಅನ್ನು ಅತ್ಯಂತ ಪ್ರೀತಿಯಿಂದ ಕಟ್ಟಿದ್ದಾರೆ. ಇಂದು ಈ ಟ್ರಸ್ಟ್‌ನ ಮೂರನೇ ವರ್ಷದ ಸಂಭ್ರಮಾಚರಣೆಯೂ ಹೌದು. ಟ್ರಸ್ಟ್‌ನ ಮೂಲಕ ಸರಸ್ವತಿ ಅವರು ನೂರಾರು ಮಹಿಳೆಯರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಸಮಾಜದಲ್ಲಿ ವಿವಿಧ ರೀತಿಯಲ್ಲಿ ನೋವು ಅನುಭವಿಸಿದ ನೂರಾರು ಮಹಿಳೆಯರು ಸಹಾಯ, ಸಹಕಾರ ಮತ್ತು ಆಶ್ರಯ ಕೋರಿ ಈ ಸಂಸ್ಥೆಗೆ ಬರುತ್ತಿದ್ದಾರೆ. ಇವರೆಲ್ಲರಿಗೂ ಸರಸ್ವತಿ ಅವರು ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಅವರಿಗೆ ಬದುಕುವ ಮಾರ್ಗ ತೋರಿಸುತ್ತಿದ್ದಾರೆ. ಈ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯುವ ಮೂಲಕ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಆಶ್ರಯ ಕಲ್ಪಿಸಲಿ ಎಂದರು. 

ಟ್ರಸ್ಟ್ ಕಾರ್ಯದರ್ಶಿ ಸರಸ್ವತಿ ಮಾತನಾಡಿ, ಇತ್ತೀಚೆಗೆ ಹೆಚ್ಚಾಗುತ್ತಿರುವ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳ ಕುರಿತು ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪೋಕ್ಸೋ ಪ್ರಕರಣಗಳು, ಮಹಿಳೆಯರಿಗೆ ಕೌನ್ಸಿಲಿಂಗ್, ಹ್ಯೂಮನ್ ಟ್ರಾಫಿಕಿಂಗ್, ಆರೋಗ್ಯ ಮುಂತಾದವುಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ. ಇತ್ತೀಚೆಗೆ ನಮ್ಮ ಸಂಸ್ಥೆಗೆ ಕರೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರ ಮನವೊಲಿಸಿ ಅವರನ್ನು ಟ್ರಸ್ಟ್ ಕಚೇರಿಗೆ ಕರೆತಂದು. ಆಶ್ರಯ ನೀಡಿ ಅವರ ಕುಟುಂಬದವರನ್ನು ಕರೆಸಿ ಕೌನ್ಸಿಲಿಂಗ್ ಮಾಡಿ ಮತ್ತೆ ಅವರ ಮನೆಗೆ ಸೇರಿಸಿದ್ದೇವೆ. ಈಗ ಅವರು ಸಂತೋಷವಾಗಿದ್ದಾರೆ ಎಂದರು.

ಸಂಸ್ಥೆಯಲ್ಲಿ ವೈದ್ಯರು, ಸೈಕಾಲಜಿಸ್ಟ್, ಥೆರಪಿಸ್ಟ್‌ಗಳು, ಕಾನೂನು ಸಲಹೆಗಾರರು ಇರುವ ಕಾರಣ ನಮ್ಮ ಸಂಸ್ಥೆ ಎಲ್ಲ ರೀತಿಯ ಸಮಾಜ ಸೇವೆಗೆ ಸಿದ್ಧವಾಗಿದೆ ಎಂದರು.

ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ಎಂ.ಸರಸ್ವತಿ, ಸುಮಿತ್ರಾ, ಜ್ಯೋತಿ ಸಿ., ಗೀತಾ ಸಿ., ಮನೋಹರ ವೈ., ಸಂಗೀತಾ ಕೆ.ಎಂ., ಮಂಜುಳ ಎಂ., ಇಂದಿರಾ ಹಾಗೂ  ಅಲಿಯನ್ಸ್ ಕ್ಲಬ್ ಆಫ್ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ ಗೌರರ್ನರ್ ಸಿರಿಬಾಲು, ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ವೈದ್ಯರಾದ ಡಾ. ರಾಜು, ಮೈಸೂರು ವಕೀಲರ ಸಂಘದ ಉಪಾಧ್ಯಕ್ಷರಾದ ಎಂ.ವಿ.ಚಂದ್ರಶೇಖರ್, ಮೃತ್ಯುಂಜಯ ಹೆಚ್.ಎಸ್., ನಿವೃತ್ತ ಶಿಕ್ಷಕರಾದ ಮಹದೇವಯ್ಯ, ಪುಟ್ಟಾಮಣಿ, ಮುಂತಾದವರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು