ಶ್ರೀರಂಗಪಟ್ಟಣ : ತಾಲ್ಲೂಕು ಆಹಾರ ಸುರಕ್ಷತಾ ಅಧಿಕಾರಿ ಹೆಚ್.ಆರ್.ಶ್ರೀನಿವಾಸ್ ಬಾಬು ಶುಕ್ರವಾರ ಸಂಜೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿನ ಸುಮಾರು 50ಕ್ಕೂ ಹೆಚ್ಚು ಫಾಸ್ಟ್‍ಫುಡ್ ಅಂಗಡಿಗಳು ಮತ್ತು ರಸ್ತೆ ಬದಿಯ ಹೋಟೆಲ್‍ಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣ, ರಂಗನಾಥ ಸ್ವಾಮಿ ದೇವಾಲಯದ ರಸ್ತೆ, ಜಾಮೀಯಾ ಮಸೀದಿ ಪಕ್ಕದಲ್ಲಿನ ಹಲವಾರು ಫಾಸ್ಟ್‍ಫುಡ್ ಅಂಗಡಿಗಳು ಮತ್ತು ರಸ್ತೆ ಬದಿಯ ಹೋಟೆಲ್‍ಗಳ ಮೇಲೆ ದಾಳಿ ನಡೆಸಿ, ಆಹಾರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದರಲ್ಲದೇ ತಿಳಿವಳಿಕೆ ನೋಟೀಸ್ ಸಹ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಪಾಸ್ಟ್‍ಫುಡ್ ಕೇಂದ್ರಗಳಲ್ಲಿ ಮತ್ತು ಹೋಟೆಲ್‍ಗಳಲ್ಲಿ ಗ್ರಾಹಕರಿಗೆ ಕಡ್ಡಾಯವಾಗಿ ಕುಡಿಯಲು ಕಾಯಿಸಿ ಆರಿಸಿದ ಶುದ್ಧ ನೀರು ಕೊಡಬೇಕು. ಫಾಸ್ಟ್‍ಫುಡ್ ತಯಾರಿಕೆ ವೇಳೆ ನಿಷೇಧಿತ ಬಣ್ಣಗಳ ಬಳಕೆ ಮಾಡಬಾರದು. ಪ್ಲಾಸ್ಟಿಕ್ ಬಳಕೆಯನ್ನೂ ಸಹ ಮಾಡಬಾರದು, ವ್ಯಾಪಾರ ಕೇಂದ್ರದ ಬಳಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ತಿಳಿವಳಿಕೆ ನೀಡಲಾಗಿದೆ. ಈ ಸಂಬಂಧ ನೋಟೀಸ್ ಸಹ ಜಾರಿ ಮಾಡಲಾಗಿದೆ ಎಂದರು.
0 ಕಾಮೆಂಟ್‌ಗಳು