ಭಾವಸಾರ ಕ್ಷತ್ರಿಯ ಸಮಾಜದ ಅಭಿವೃದ್ಧಿಗೆ ಬದ್ಧ : ತನ್ವೀರ್ ಸೇಠ್

ಚಾಮುಂಡೇಶ್ವರಿ ಪೂಜಾ ಮಹೋತ್ಸವದಲ್ಲಿ ಅನ್ನಸಂತರ್ಪಣೆ

ಮೈಸೂರು : ಭಾವಸಾರ ಕ್ಷತ್ರಿಯ ಸಮಾಜದ ಅಭಿವೃದ್ಧಿಗೆ ತಾವು ಬದ್ಧರಾಗಿದ್ದು, ಸಮುದಾಯದ ಮುಖಂಡರು ತಮಗೆ ಅಗತ್ಯವಿರುವ ಕೆಲಸ ಕಾರ್ಯಗಳನ್ನು ಯಾವುದೇ ಸಮಯದಲ್ಲಿ ಹೇಳಿದರೂ ಮಾಡುತ್ತೇನೆಂದು ಶಾಸಕ ತನ್ವೀರ್ ಸೇಠ್ ಭರವಸೆ ನೀಡಿದರು. ನಗರದ ಕಲ್ಯಾಣಗಿರಿ ನಾಲ್ಕನೇ ಹಂತದಲ್ಲಿರುವ ಭಾವಸಾರ ಕ್ಷತ್ರಿಯ ಯುವಕರ ಸಂಘದಿಂದ ಏರ್ಪಡಿಸಿದ್ದ ೨೪ನೇ ವರ್ಷದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವದ ಪ್ರಯುಕ್ತ ನಡೆದ ಅನ್ನಸಂತರ್ಪಣೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು. 

ನಾನು ಈ ಹಿಂದೆ ಮೈಸೂರು ಮಹಾನಗರಪಾಲಿಕೆ ಸದಸ್ಯನಾದಗಿನಿಂದಲೂ ಈ ಸಮುದಾಯ ನನ್ನ ಬೆನ್ನಹಿಂದೆ ನಿಂತು ಬೆಂಬಲ ನೀಡಿದೆ. ಶಾಸಕನಾದಾಗಲೂ ನನಗೆ ಸಹಾಯ ಮಾಡಿದೆ. ನನ್ನೊಂದಿಗೆ ಈ ಸಮುದಾಯದ ಮುಖಂಡರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಂಖ್ಯಾಬಲದಲ್ಲಿ ಕಡಿಮೆ ಇದ್ದರೂ ಸಹ ಹೆಚ್ಚು ಸಂಘಟಿತರಾಗಿದ್ದಾರೆ. ನಾನು ಈ ಕ್ಷೇತ್ರದ ಶಾಸಕನಾಗಿ ಸಮುದಾಯದ ಅಭಿವೃದ್ಧಿಗೆ ಸೇವೆ ಮಾಡಲು ಸದಾ ಸಿದ್ದನಾಗಿದ್ದೇನೆ ಎಂದರು.

ಇಂದಿನ ಕಾರ್ಯಕ್ರಮದಲ್ಲಿ ಸಮುದಾಯದ ಹಿರಿಯರನ್ನು ಗೌರವಿಸುತ್ತಿರುವುದು ಅತ್ಯಂತ ಸಂತೋಷದ ವಿಷಯ. ನಾಡಿನ ಅದಿ ದೇವತೆ ಚಾಮುಂಡೇಶ್ವರಿ ಎಲ್ಲರಿಗೂ ಶುಭವನ್ನುಂಟು ಮಾಡಲಿ ಎಂದರು. ಇದೇ ಸಂದರ್ಭದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಶಾಸಕರಾದ ತನ್ವೀರ್ ಸೇಠ್, ಮುಖಂಡರಾದ ಮಂಜುನಾಥ್ ಹಾಗೂ ಸಮುದಾಯದ ಹಿರಿಯ ಮುಖಂಡರನ್ನು ಅಭಿನಂದಿಸಲಾಯಿತು. ತುಂತುರು ಮಳೆಯ ನಡುವೆಯೂ ಅನ್ನಸಂತರ್ಪಣೆ ನಡೆಯಿತು. 

ಸಾವಿರಾರು ಜನರು ಚಾಮುಂಡೇಶ್ವರಿಗೆ ನಮಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಮಂಜುನಾಥ್ ಲಾಲೆ, ಗೌರವ ಕಾರ್ಯಾಧ್ಯಕ್ಷರಾದ ಗಣೇಶ್ ನಾಝರೆ, ಉಪಾಧ್ಯಕ್ಷರಾದ ರಾಘು ಕೆ.ಖಾಟೋಕರ್, ಗೌರವ ಕಾರ್ಯದರ್ಶಿ ರಾಕೇಶ್ ಹಲಾಲೆ, ಖಜಾಂಚಿ ಗಣೇಶ್ ಲಾಲೆ, ನಿರ್ದೇಶಕರಾದ ಕಿಶೋರಿ ಕುತ್ನೀಕರ್, ಸುಬ್ರಮಣಿ ಹಲಾಲೆ, ಚಂದ್ರಶೇಖರ್ ಮಹೇಂದ್ರಕರ್, ಪ್ರದೀಪ ಮಾಳೋದೆ, ಮಂಜುನಾಥ್ ಕಾಂಗೋಕರ್, ರಾಜೇಶ್ ಇಜಾಫ್ನರ್, ಸಂಜಯ್ ರಾಂಪೊರೆ, ಕಿರಣ್ ಮೊಸಳೆ, ಲೋಕೇಶ್ ಸಿಂತ್ರೆ, ಭಾವಸಾರ ಕ್ಷತ್ರಿಯ ಮಹಿಳಾ ಸಂಘದ ಅಧ್ಯಕ್ಷರಾದ ಚೇತನ ಸಿಂತ್ರೆ, ಗೌರವ ಕಾರ್ಯದರ್ಶಿ ಶೃತಿ ಕೆ.ಹಲಾಲೆ, ಖಜಾಂಚಿ ಪೂಜಾ ಆರ್.ಕಾಂಗೋಕರ್, ಸಂಚಾಲಕರಾದ ಲಕ್ಷ್ಮಿ ಎಸ್.ಜಿ.ಬಾಟೋಕರ್, ನಿರ್ದೇಶಕರಾದ ಲಕ್ಷ್ಮಿ ಇಜಾಫರ್, ಸೋನಿ ನಾಝರೆ, ಶೋಭಾ ಹಲಾಲೆ, ದಾಕ್ಷಾಯಿಣಿ ನಾಯಕ್, ರೇಣುಕ ಲಾಲೆ, ಆಶಾ ಬಿಕರೆ, ಭವಾನಿ ಲಾಲೆ, ಲತಾ ಇಜಾಫರ್, ಅರುಣಾ ಕುತ್ನೀಕರ್, ಪಲ್ಲವಿ ರಾಂಪೋರೆ ಮುಂತಾದವರು ಇದ್ದರು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು