ಮೂರು ದಿನಗಳ ಕಾಲ ನಡೆಯುವ ಈ ಪೂಜಾ ಮಹೋತ್ಸವದ ಅಂತಿಮ ದಿನವಾದ ಬುಧವಾರದಂದು ಮಹಾ ಮಂಗಳಾರತಿ ಬಳಿಕ ಶ್ರೀ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ವಿಜೃಂಭೆಯಿಂದ ಮೆರವಣಿಗೆ ಮೂಲಕ ವಿಸರ್ಜಿಸಲಾಯಿತು.
ಗೋಂದಳಿ ಸಮಾಜದ ನೂರಾರು ಮುಖಂಡರು, ಸಾವಿರಾರು ಭಕ್ತರ ಜಯಘೋಷಗಳ ನಡುವೆ ಮೆರವಣಿಗೆಯು ಪುಲಕೇಶಿ ರಸ್ತೆ ಮೂಲಕ ಜೈಲ್ ರಸ್ತೆ ಮಾರ್ಗವಾಗಿ ಫೌಂಟನ್ ಸರ್ಕಲ್‌ನಿಂದ ದಂಡಿ ಮಾರಮ್ಮನ ದೇವಾಲಯದ ತನಕ ಸಾಗಿತು.
ಮೆರವಣೆಗೆಯಲ್ಲಿ ಡಿಜೆ, ವೀರಗಾಸೆ ಕುಣಿತ, ಗಾರುಡಿ ಗೊಂಬೆಗಳು, ವಿವಿಧ ವೇಷಧಾರಿಗಳು, ರಾಜ ರಾಣಿಯರ ಉಡುಪು ಧರಿಸಿದ ಮಕ್ಕಳು, ಡೊಳ್ಳು ಕುಣಿತದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.
ಸಮುದಾಯದ ಯುವಕ ಯುವತಿಯರೂ ಸಹ ಮೆರವಣಿಗೆ ಉದ್ದಕ್ಕೂ ನರ್ತಿಸಿ ಸಂಭ್ರಮಿಸಿದರು.
ಸೋಮವಾರ ಬೆಳಗ್ಗೆ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ತಿಲಕ್‌ನಗರದಿಂದ ಶಿವಾಜಿ ನಗರಕ್ಕೆ ಮೆರವಣಿಗೆ ಮೂಲಕ ದೇವರನ್ನು ತಂದು ಶಿವಾಜಿನಗರದ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಪೂಜೆ ಪುನಸ್ಕಾರಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು,
ಈ ಸಂದರ್ಭದಲ್ಲಿ ಗೋಂದಳಿ ಸಮಾಜದ ಕಾರ್ಯದರ್ಶಿ ರವಿ ಇಗ್ವೆ ಮಾತನಾಡಿ, ಕಳೆದ ೧೪೩ ವರ್ಷಗಳಿಂದ ಶ್ರೀ ಚಾಮುಂಡೇಶ್ವರಿ ಉತ್ಸವವನ್ನು ನಮ್ಮ ಬಡಾವಣೆಯಲ್ಲಿ ಆಚರಿಸಿಕೊಂಡು ಬರುತ್ತಿದ್ದೇವೆ. ಬಡಾವಣೆಯ ಎಲ್ಲ ಸಮುದಾಯದವರೂ ಸಹ ಇದಕ್ಕೆ ಬೆಂಬಲ ನೀಡುತ್ತಿದ್ದಾರೆ. ನಮ್ಮ ಸಮುದಾಯದ ಜನರು ರಾಜ್ಯದ ಮತ್ತು ದೇಶದ ವಿವಿಧೆಡೆ ನೆಲೆಸಿದ್ದು, ಚಾಮುಂಡೇಶ್ವರಿ ಉತ್ಸವದಂದು ಎಲ್ಲರೂ ಸೇರಿ ಒಟ್ಟಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ದೂರದ ಮುಂಬೈ, ಚೆನೈ, ಪಾಲಹಳ್ಳಿ, ಮಂಡ್ಯ, ಪಿರಿಯಾಪಟ್ಟಣ, ಹುಣಸೂರು, ಕೆಆರ್ ನಗರ, ನಂಜನಗೂಡು, ಚಾಮರಾಜನಗರ, ಬೆಂಗಳೂರು ಕಡೆಯಿಂದಲೂ ನಮ್ಮ ಸಮುದಾಯದ ಜನರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದಾರೆ ಎಂದರು.
ಮೆರವಣಿಗೆಯಲ್ಲಿ ಭಾರಿ ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದ್ದರು. ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಪೊಲೀಸರು ಸೂಕ್ತ ಮುಂಜಾಗ್ರತೆ ವಹಿಸಿ ಬಿಗಿ ಬಂದೋಬಸ್ತ್ ಮಾಡಿದ್ದರು.
0 ಕಾಮೆಂಟ್‌ಗಳು