ಭಾವಸಾರ ಕ್ಷತ್ರಿಯ ಯುವಕ ಸಂಘದಿಂದ ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆ
ಜುಲೈ 30, 2024
ಮೈಸೂರು : ನಗರದ ಕಲ್ಯಾಣಗಿರಿ ನಾಲ್ಕನೇ ಹಂತದಲ್ಲಿರುವ ಭಾವಸಾರ ಕ್ಷತ್ರಿಯ ಯುವಕರ ಸಂಘದಿಂದ ಮಂಗಳವಾರ ೨೪ನೇ ವರ್ಷದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವದ ಪ್ರಯುಕ್ತ ನಡೆದ ದೇವಿಯ ಪ್ರತಿಷ್ಠಾಪನಾ ಕಾರ್ಯ ಅದ್ದೂರಿಯಾಗಿ ಜರುಗಿತು. ತುಂತುರು ಮಳೆಯ ನಡುವೆ ಸಮುದಾಯದ ಮುಖಂಡರು, ಯುವಕರು ಮತ್ತು ಮಹಿಳೆಯರು ರಾಘವೇಂದ್ರ ನಗರದಲ್ಲಿರುವ ಮಾರಮ್ಮನ ದೇವಾಲಯಕ್ಕೆ ತೆರಳಿ ವಾದ್ಯಗೋಷ್ಠಿ ಸಮೇತ ಮೆರವಣಿಗೆ ಮೂಲಕ ದೇವಿಯ ಮೂರ್ತಿಗಳನ್ನು ಹೊತ್ತು ತಂದರು. ಮೆರವಣಿಗೆಯುದ್ದಕ್ಕೂ ಸಮುದಾಯದ ಯುವಕರು, ಮಹಿಳೆಯರು ಮತ್ತು ಮಕ್ಕಳು ವಾದ್ಯಗೋಷ್ಠಿಗೆ ತಕ್ಕಂತೆ ನರ್ತಿಸಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಮಂಜುನಾಥ್ ಲಾಲೆ ಮಾತನಾಡಿ, ಕಳೆದ ೨೪ ವರ್ಷದಿಂದ ನಾವು ಚಾಮುಂಡೇಶ್ವರಿ ಉತ್ಸವವನ್ನು ನಡೆಸುತ್ತಿದ್ದೇವೆ. ಮೈಸೂರಿನಲ್ಲಿರುವ ಭಾವಸಾರ ಕ್ಷತ್ರಿಯ ಸಮುದಾಯದ ಎಲ್ಲ ಮುಖಂಡರು ಮತ್ತು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಮೊದಲ ದಿನ ದೇವಿಯ ಪ್ರತಿಷ್ಠಾಪನೆ, ಎರಡನೇ ದಿನ ಮಕ್ಕಳಿಗೆ ರಂಗೋಲಿ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ, ಫ್ಯಾಷನ್ ಶೋ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಮಕ್ಕಳಿಗೆ ಬಹುಮಾನ ನೀಡಲಾಗುವುದು. ಮೂರನೇ ದಿನ ಮದ್ಯಾಹ್ನ ಮಹಾ ಮಂಗಳಾರತಿ ಬಳಿಕ ಅನ್ನಸಂತರ್ಪಣೆ ನಡೆಸಲಾಗುವುದು ಬಳಿಕ, ಪ್ರತಿಷ್ಠಾಪಿಸಿದ ಮೂರ್ತಿಗಳನ್ನು ತ್ರಿವೇಣಿ ವೃತ್ತದ ಮೂಲಕ ಶ್ರೀರಂಗಪಟ್ಟಣದಲ್ಲಿರುವ ಕಾವೇರಿ ನದಿಯಲ್ಲಿ ವಿಸರ್ಜಿಸಲಾಗುವುದು ಎಂದರು. ಮೈಸೂರಿನಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಕಡಿಮೆ ಇದ್ದು, ಚಾಮುಂಡೇಶ್ವರಿ ಪೂಜಾ ಮಹೋತ್ಸವವೇ ನಮ್ಮ ಸಮುದಾಯದ ವಿಶೇಷ ಹಬ್ಬವಾಗಿದೆ ಎಂದರು. ಸಂಘದ ಅಧ್ಯಕ್ಷರಾದ ಮಂಜುನಾಥ್ ಲಾಲೆ, ಗೌರವ ಕಾರ್ಯಾಧ್ಯಕ್ಷರಾದ ಗಣೇಶ್ ನಾಝರೆ, ಉಪಾಧ್ಯಕ್ಷರಾದ ರಾಘು ಕೆ.ಖಾಟೋಕರ್, ಗೌರವ ಕಾರ್ಯದರ್ಶಿ ರಾಕೇಶ್ ಹಲಾಲೆ, ಖಜಾಂಚಿ ಗಣೇಶ್ ಲಾಲೆ, ನಿರ್ದೇಶಕರಾದ ಕಿಶೋರಿ ಕುತ್ನೀಕರ್, ಸುಬ್ರಮಣಿ ಹಲಾಲೆ, ಚಂದ್ರಶೇಖರ್ ಮಹೇಂದ್ರಕರ್, ಪ್ರದೀಪ ಮಾಳೋದೆ, ಮಂಜುನಾಥ್ ಕಾಂಗೋಕರ್, ರಾಜೇಶ್ ಇಜಾಫ್ನರ್, ಸಂಜಯ್ ರಾಂಪೊರೆ, ಕಿರಣ್ ಮೊಸಳೆ, ಲೋಕೇಶ್ ಸಿಂತ್ರೆ, ಭಾವಸಾರ ಕ್ಷತ್ರಿಯ ಮಹಿಳಾ ಸಂಘದ ಅಧ್ಯಕ್ಷರಾದ ಚೇತನ ಸಿಂತ್ರೆ, ಗೌರವ ಕಾರ್ಯದರ್ಶಿ ಶೃತಿ ಕೆ.ಹಲಾಲೆ, ಖಜಾಂಚಿ ಪೂಜಾ ಆರ್.ಕಾಂಗೋಕರ್, ಸಂಚಾಲಕರಾದ ಲಕ್ಷ್ಮಿ ಎಸ್.ಜಿ.ಬಾಟೋಕರ್, ನಿರ್ದೇಶಕರಾದ ಲಕ್ಷ್ಮಿ ಇಜಾಫರ್, ಸೋನಿ ನಾಝರೆ, ಶೋಭಾ ಹಲಾಲೆ, ದಾಕ್ಷಾಯಿಣಿ ನಾಯಕ್, ರೇಣುಕ ಲಾಲೆ, ಆಶಾ ಬಿಕರೆ, ಭವಾನಿ ಲಾಲೆ, ಲತಾ ಇಜಾಫರ್, ಅರುಣಾ ಕುತ್ನೀಕರ್, ಪಲ್ಲವಿ ರಾಂಪೋರೆ ಮುಂತಾದವರು ಇದ್ದರು.
0 ಕಾಮೆಂಟ್‌ಗಳು