ಜೇನುಗೂಡು ಸೇವಾ ಸಮಿತಿಯಿಂದ ಏರ್ಪಡಿಸಿದ್ದ ಮೂರು ದಿನಗಳ ಶ್ರೀ ಚಾಮುಂಡೇಶ್ವರಿ ಪೂಜಾ ಮಹೋತ್ಸವ ಸಂಪನ್ನ

 

ಮೈಸೂರು : ವಿಜಯನಗರ ನಾಲ್ಕನೇ ಹಂತದಲ್ಲಿರುವ ಜೇನುಗೂಡು ಸೇವಾ ಸಮಿತಿಯಿಂದ ಏರ್ಪಡಿಸಿದ್ದ ಮೂರು ದಿನಗಳ ಶ್ರೀ ಚಾಮುಂಡೇಶ್ವರಿ ಪೂಜಾ ಮಹೋತ್ಸವ ಭಾನುವಾರ ಅನ್ನಸಂತರ್ಪಣೆಯೊಂದಿಗೆ ಸಂಪನ್ನಗೊಂಡಿತು,
ಸುಮಾರು ಐದು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ತುಂತುರು ಮಳೆಯ ನಡುವೆ ಭಕ್ತರು ಸರತಿಯ ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿಸಿ ಚಾಮುಂಡೇಶ್ವರಿ ಕೃಪೆಗೆ ಪಾತ್ರರಾದರು.

ಮೂರು ದಿನಗಳ ಕಾಲ ನಡೆದ ಈ ವಿಶೇಷ ಪೂಜಾ ಮಹೋತ್ಸವದಲ್ಲಿ ಶಾಸಕರಾದ ಜಿಟಿ ದೇವೇಗೌಡ, ಹರೀಶ್‌ಗೌಡ, ಬಿಜೆಪಿ ಮುಖಂಡ ಕವೀಶ್‌ಗೌಡ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಸ್‌ಬಿಎಂ ಮಂಜು, ಚಲನಚಿತ್ರ ಹಾಸ್ಯನಟ ವಿಶ್ವ, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಪಕ್ಷಬೇಧ ಮರೆತು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ, ಅನೇಕ ಸ್ಥಳೀಯ ಮುಖಂಡರು, ಉದ್ಯಮಿಗಳು, ಮಹಿಳಾ ಮುಖಂಡರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮೂರು ದಿನವೂ ಸಹ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಗಿತ್ತು.

ಮೊದಲ ದಿನದ ಪೂಜೆಯಲ್ಲಿ ಚಾಮುಂಡೇಶ್ವರಿ ಮಂಟಪವನ್ನು ವಿವಿಧ ಹೂವುಗಳು ಮತ್ತು ಹಣ್ಣುಗಳಿಂದ ಸಿಂಗರಿಸಲಾಗಿತ್ತು. ಅಲ್ಲದೇ ವಿದ್ಯುತ್ ದೀಪಗಳಿಂದಲೂ ಮಂಟಪವನ್ನು ಶೃಂಗಾರ ಮಾಡಲಾಗಿತ್ತು. ಹೂಟಗಳ್ಳಿ, ವಿಜಯನಗರ ನಾಲ್ಕನೇ ಹಂತ ಬಡಾವಣೆಯ ಸಾವಿರಾರು ಮಹಿಳೆಯರು ಮೂರೂ ದಿನಗಳ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು. 
ಎರಡನೇ ದಿನದಂದು ಶನಿವಾರ ಶ್ರೀ ಚಾಮುಂಡೇಶ್ವರಿ ದೇವಿಯ ವರ್ಧಂತಿ ಪೂಜಾ ಮಹೋತ್ಸವವೂ ಕೂಡ ಸಂಭ್ರಮದಿಂದ ನಡೆಯಿತು. 

ಜೇನುಗೂಡು ಸೇವಾ ಸಮಿತಿ ವತಿಯಿಂದ ಈ ಬಡಾವಣೆಯ ನೂರಾರು ಮಹಿಳೆಯರು ಒಟ್ಟಾಗಿ ಸೇರಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಈ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು. ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ರಾಜ್ಯ ಸಮೃದ್ಧಿಯಾಗಿದೆ. ಎಲ್ಲರಿಗೂ ಒಳ್ಳೆಂiiದಾಗಲಿ ಎಂದು ಮುಖಂಡರು ಸಂತಸ ವ್ಯಕ್ತಪಡಿಸಿದ್ದರು. 
ಮೂರು ದಿನಗಳ ಪೂಜಾ ಮಹೋತ್ಸವದಲ್ಲಿ ಜೇನುಗೂಡು ಸೇವಾ ಸಮಿತಿ ಸಂಸ್ಥಾಪಕರಾದ ರಾಧ ಸೆಂಧಿಲ್, ಮಾಲ ಮಹೇಂದ್ರ, ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭವ್ಯ ಮುತ್ತುರಾಜ್, ನತೀಶ್ ಗೌಡ, ನವೀಶ್ ಗೌಡ, ಹೃತ್ವಿಕ್ ಗೌಡ, ಯಾತ್ರೆಶ್ ಗೌಡ, ರತನ್ ಗೌಡ, ನಾಗೇಶ್ ಗೌಡ ಮತ್ತು ರಾಕೇಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು