500ಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‍ಪುಸ್ತಕ, ಬ್ಯಾಗ್ ವಿತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು
ಜುಲೈ 15, 2024
ವರದಿ-ನಜೀರ್ ಅಹಮದ್ ಮೈಸೂರು : ನಗರದ ಬಂಡಿಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ವಿವಿಧ ಸರ್ಕಾರಿ ಶಾಲೆಯ 500ಕ್ಕೂ ಹೆಚ್ಚು ಮಕ್ಕಳಿಗೆ ನೋಟ್‍ಬುಕ್ ಮತ್ತು ಬ್ಯಾಗ್ ಸೇರಿದಂತೆ ಅವರಿಗೆ ಇಷ್ಟವಾದ ಉಪಹಾರ ಕೊಡಿಸುವ ಮೂಲಕ ಕಾಂಗ್ರೆಸ್ ಮುಖಂಡ, ಸಿಎಂ ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾನಿ ಎಪಿಎಂಸಿ ಮಾಜಿ ಅಧ್ಯಕ್ಷರೂ ಆದ ಬಸವರಾಜು ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಸೋಮವಾರ ಬೆಳಗ್ಗೆ ನಗರದ ಬಂಡಿಪಾಳ್ಯ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವರಾಜು ಅವರು ಮಕ್ಕಳಿಗೆ ಸ್ಕೂಲ್ ಬ್ಯಾಗ್, ನೋಟ್ ಬುಕ್ ವಿತರಣೆ ಮಾಡಿ ಬಳಿಕ ಮಕ್ಕಳಿಗೆ ಇಷ್ಟವಾದ ಸಿಹಿ ತಿಂಡಿಯೊಂದಿಗೆ ಉಪಹಾರವನ್ನೂ ಬಡಿಸಿ ಮಾತನಾಡಿ, ಕಳೆದ ಮೂರು ವರ್ಷದಿಂದ ನನ್ನ ಹುಟ್ಟುಹಬ್ಬವನ್ನು ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಆಚರಿಸಿಕೊಳ್ಳುತ್ತಿದ್ದೇನೆ. ಈ ಮಕ್ಕಳು ನನ್ನನ್ನು ಪ್ರೀತಿಯಿಂದ ಹಾರೈಸುವುದರಲ್ಲಿ ಅತ್ಯಂತ ಸಂತೋಷವನ್ನು ಕಾಣುತ್ತೇನೆ. ಯಾವುದೇ ರೀತಿಯ ದುಂದುವೆಚ್ಚ ಮಾಡದೆ, ಅದೇ ಹಣದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಅಗತ್ಯವಾದ ನೋಟ್‍ಬುಕ್ ಮತ್ತು ಬ್ಯಾಗ್‍ಗಳನ್ನು ವಿತರಣೆ ಮಾಡುತ್ತಿದ್ದೇನೆ. ಮುಂದೆಯೂ ಸಹ ಇದಕ್ಕಿಂತಲೂ ಹೆಚ್ಚು ಸಹಾಯ ಮಾಡುವ ಮನಸ್ಸಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಗಮ ಮಂಡಳಿಯಲ್ಲಿ ಸ್ಥಾನ ಕಲ್ಪಿಸುವುದರ ಬಗ್ಗೆ ಮಾತನಾಡಿದ ಅವರು, ನಾವೆಲ್ಲರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಪ್ಪಟ ಅಭಿಮಾನಿಗಳು, ಅವರ ನೆರಳಿನಲ್ಲಿ ಬೆಳೆಯುತ್ತಿದ್ದೇವೆ. ಅವರು ಯಾವುದೇ ಸ್ಥಾನ ಮಾನ ಕೊಟ್ಟರೂ ಸಂತೋಷದಿಂದ ಪಡೆದು ಉತ್ತಮವಾಗಿ ಕೆಲಸ ಮಾಡಿ ಅವರ ಗೌರವವನ್ನು ಹೆಚ್ಚಿಸುತ್ತೇವೆ. ಒಂದು ವೇಳೆ ಕೊಡದಿದ್ದರೂ ಯಾವುದೇ ಬೇಸರವಿಲ್ಲದೆ ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಯುವ ಮುಖಂಡರಾದ ಚೇತನ್, ರಕ್ಷಿತ್, ಸುದರ್ಶನ್, ಗೋವಿಂದ, ಗುಣಶೀಲ, ಮೋಹನ್ ಕುಮಾರ, ಪ್ರೀತಂ, ರಂಗಸ್ವಾಮಿ, ಅರ್ಜುನ, ಹೊನ್ನಪ್ಪ, ಕೀರ್ತಿ, ದೇವರಾಜ ಮಾರ್ಕೆಟ್ ಪುಟ್ಟಸ್ವಾಮಿ, ಪುನೀತ, ಮಹೇಶ್, ಪ್ರಜ್ವಲ್, ಮನು, ಶಿಕ್ಷಕರಾದ ಸುಶೀಲ, ಮನೋಹರ್, ಮಾರ್ಗರೇಟ್, ಜಯಲಲಿತಾ, ಕವಿತಾ, ಅನಿತಾ ಮತ್ತಿತರರು ಇದ್ದರು.
0 ಕಾಮೆಂಟ್‌ಗಳು